Back to Top

'ಚಿತ್ರರಂಗಕ್ಕೆ ಹಣಕ್ಕಾಗಿ ಅಲ್ಲ, ಹೃತ್ಪೂರ್ವಕ ಉದ್ದೇಶದಿಂದ ಬಂದಿದ್ದೇನೆ’ – ಯಶ್ ತಾಯಿ ಪುಷ್ಪಾ ಹೇಳಿಕೆ

SSTV Profile Logo SStv August 6, 2025
ಚಿತ್ರರಂಗದಲ್ಲಿ ಶಾಶ್ವತವಿರುವ ನಿರ್ಧಾರ ಪ್ರಕಟಿಸಿದ ಪುಷ್ಪಾ
ಚಿತ್ರರಂಗದಲ್ಲಿ ಶಾಶ್ವತವಿರುವ ನಿರ್ಧಾರ ಪ್ರಕಟಿಸಿದ ಪುಷ್ಪಾ

ಅಭಿಮಾನಿಗಳ ಮೆಚ್ಚಿಗೆಗೆ ಪಾತ್ರವಾದ "ಕೊತ್ತಲವಾಡಿ" ಚಿತ್ರದ ಯಶಸ್ಸಿನಿಂದ ಖುಷಿಯಾಗಿರುವ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್, ಚಲನಚಿತ್ರರಂಗದಲ್ಲಿ ಶಾಶ್ವತವಾಗಿ ತಾವು ಉಳಿಯಲಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ. ಪುಷ್ಪಾ ಅವರು ಯಶ್ ಅವರ ತಾಯಿ ಆಗಿದ್ದು, ಈ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ತಮ್ಮ ಪಾದಾರ್ಪಣೆ ಮಾಡಿದ್ದಾರೆ.

'ಬಂದ್ಮೇಲೆ ಹೋಗೋ ಜಾಯಮಾನ ಅಲ್ಲ. ನಾನು ಹಿಂತಿರುಗಲ್ಲ' ಎಂದು ಧೈರ್ಯದಿಂದ ಹೇಳಿದ್ದಾರೆ. ಈ ಸಿನಿಮಾ ಯಶಸ್ಸಿನ ಬಳಿಕ ಶರಣ್ ಅವರನ್ನು ನಾಯಕನಾಗಿ ಆಯ್ಕೆಮಾಡಿ ಮತ್ತೊಂದು ಚಿತ್ರ ನಿರ್ಮಿಸಲು ತಯಾರಿ ನಡೆಸಿದ್ದಾರೆ. ಶ್ರೀರಾಜು ಅವರೇ ನಿರ್ದೇಶಕರಾಗಲಿದ್ದು, ಕಥೆಯನ್ನು ಗಂಭೀರವಾಗಿ ತಯಾರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

"ನಾನು ಹಣದ ಹೆಸರಲ್ಲಿ ಈ ಕ್ಷೇತ್ರಕ್ಕೆ ಬಂದವಳು ಅಲ್ಲ. ಸಂದೇಶ ನೀಡುವ ಚಿತ್ರಗಳನ್ನೇ ಮಾಡಬೇಕು ಎಂಬುದು ನನ್ನ ಆಶಯ" ಎಂದು ಪುಷ್ಪಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಕೊತ್ತಲವಾಡಿ" ಆಗಸ್ಟ್ 1 ರಂದು ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದೆ.