Back to Top

ಚಿತ್ರಮಂದಿರದಲ್ಲಿ ಬ್ಲಾಕ್ ಬಸ್ಟರ್ ಆದ ‘ಕುಬೇರ’ ಈಗ ಒಟಿಟಿಯಲ್ಲಿ! ಹಿಟ್‌ ಮೂವಿ ಮಿಸ್‌ ಮಾಡಿದ್ರೆ ಮನೆಯಲ್ಲೇ ನೋಡಿ

SSTV Profile Logo SStv July 11, 2025
ಚಿತ್ರಮಂದಿರದಲ್ಲಿ ಬ್ಲಾಕ್ ಬಸ್ಟರ್ ಆದ ‘ಕುಬೇರ’ ಈಗ ಒಟಿಟಿಯಲ್ಲಿ
ಚಿತ್ರಮಂದಿರದಲ್ಲಿ ಬ್ಲಾಕ್ ಬಸ್ಟರ್ ಆದ ‘ಕುಬೇರ’ ಈಗ ಒಟಿಟಿಯಲ್ಲಿ

ಕಳೆದ ಕೆಲವು ವಾರಗಳಲ್ಲಿ ಚಿತ್ರಮಂದಿರಗಳಲ್ಲಿ ಭಾರೀ ಸಂಚಲನ ಮೂಡಿಸಿದ್ದ ಧನುಶ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'ಕುಬೇರ' ಸಿನಿಮಾ ಇದೀಗ ಒಟಿಟಿ ಪ್ರೇಕ್ಷಕರಿಗೆ ಸಿದ್ಧವಾಗಿದೆ. ಶೇಖರ್ ಕಮ್ಮುಲ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಾಮಾಜಿಕ ಥ್ರಿಲ್ಲರ್ ಸಿನಿಮಾ, ಬಿಡುಗಡೆಯ ದಿನದಿಂದಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

100 ಕೋಟಿ ಕ್ಲಬ್ ಸೇರಿದ 'ಕುಬೇರ', ಧನುಶ್, ರಶ್ಮಿಕಾ ಮತ್ತು ನಾಗಾರ್ಜುನ ಅಭಿನಯದ ಈ ಚಿತ್ರವು ಅಷ್ಟರಲ್ಲೇ 100 ಕೋಟಿ ಕಲೆಕ್ಷನ್ ಮಾಡಿ ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರಿದೆ. ಕುಟುಂಬ ಸಮೇತ ವೀಕ್ಷಿಸಲು ಯೋಗ್ಯವಾಗಿರುವ ಚಿತ್ರವಾಗಿ ಜನಪ್ರಿಯತೆ ಪಡೆದುಕೊಂಡಿದೆ. ಸಂಗೀತ, ನಟನೆ, ಕಥೆ ಎಲ್ಲವೂ ಪ್ರೇಕ್ಷಕರನ್ನು ತೀವ್ರವಾಗಿ ಆಕರ್ಷಿಸಿದೆ.

‘ಕುಬೇರ’ ಸಿನಿಮಾ ಜುಲೈ 18ರಂದು ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ ಬಿಡುಗಡೆಯಾಗಲಿದೆ. ಭಾರತದಷ್ಟೇ ಅಲ್ಲದೆ ವಿಶ್ವದಾದ್ಯಂತ ಒಟ್ಟಿಗೇ ಬಿಡುಗಡೆಗೊಳ್ಳಲಿರುವ ಈ ಸಿನಿಮಾ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಆಗಿ ಲಭ್ಯವಿರಲಿದೆ. ಚಿತ್ರಮಂದಿರ ಬಿಡುಗಡೆಯಗೂ ಮುಂಚೆ ಈ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ಬರೋಬ್ಬರಿ ₹50 ಕೋಟಿ ರೂಪಾಯಿಗೆ ಖರೀದಿಸಿತ್ತು. ಈ ವ್ಯಾಪಾರವು ಭಾರತೀಯ ಒಟಿಟಿ ಮಾರುಕಟ್ಟೆಯಲ್ಲಿ ಗಮನ ಸೆಳೆಯುವಂತದ್ದು.

'ಕುಬೇರ' ಚಿತ್ರವು ಬಡ ಮತ್ತು ಶ್ರೀಮಂತರ ನಡುವಿನ ವ್ಯತ್ಯಾಸ, ಅರ್ಥದ ಆಧಾರದ ಮೇಲೆ ಉಂಟಾಗುವ ದುರಾಸೆ ಹಾಗೂ ಅನ್ಯಾಯಗಳನ್ನು ಪ್ರದರ್ಶಿಸುತ್ತದೆ. ಈ ಕಥಾನಕವನ್ನು ಶೇಖರ್ ಕಮ್ಮುಲ ಅವರ ವಿಭಿನ್ನ ಕಣ್ಮೆರೆಯಲ್ಲಿ ನೋಡುವ ಅವಕಾಶ ಈ ಸಿನಿಮಾದಲ್ಲಿ ಸಿಕ್ಕಿದೆ. ದೇವಿ ಶ್ರೀ ಪ್ರಸಾದ್ ಅವರ ಸೊಗಸಾದ ಸಂಗೀತ ಹಾಗೂ ರೀ-ರೆಕಾರ್ಡಿಂಗ್ ಸಹ ಚಿತ್ರಕ್ಕೆ ಹೊಸ ಜೀವ ತುಂಬಿದೆ. ಈ ಸಿನಿಮಾದಲ್ಲಿ ಧನುಶ್ ಅವರು ತೋರಿಸಿರುವ ನಟನೆಗೆ ಸಿನಿಮೋಲೋಕದವರು ಪ್ರಶಂಸಿಸುತ್ತಿದ್ದು, ಅವರ ಈ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಗಬಹುದೆಂಬ ನಿರೀಕ್ಷೆ ವ್ಯಕ್ತವಾಗಿದೆ. ಜೊತೆಗೆ ರಶ್ಮಿಕಾ ಮತ್ತು ನಾಗಾರ್ಜುನ ಅವರ ನಟನೆ ಕೂಡ ಕಲೆಕ್ಷನ್‌ನನ್ನು ಬೆಂಬಲಿಸುವಂತಿದೆ.

ಸೂಕ್ತ ಸಮಯದಲ್ಲಿ ಒಟಿಟಿಗೆ ಬಂದ ಚಿತ್ರ, ಸಿನಿಮಾ ಪ್ರೇಮಿಗಳಿಗೆ ‘ಕುಬೇರ’ ಈಗ ಒಂದು ಕ್ಲಿಕ್‌ಅಷ್ಟರಲ್ಲಿ ಲಭ್ಯವಿರುವ ಹಂತಕ್ಕೆ ಬಂದಿದೆ. ಸಿನಿಮಾ ಚಿತ್ರಮಂದಿರದಲ್ಲಿ ಮಿಸ್ ಮಾಡಿದ್ದವರು ಈಗ ಜುಲೈ 18ರಿಂದ ತಮ್ಮ ಮನೆಯಲ್ಲೇ ಕುಳಿತು ಈ ಥ್ರಿಲ್ಲರ್ ಸಿನಿಮಾ ಅನುಭವಿಸಬಹುದು.