Back to Top

ನಾಳೆ ಚನ್ನಪಟ್ಟಣದ ದಶಾವರದಲ್ಲಿ ಬಿ. ಸರೋಜಾ ದೇವಿ ಅಂತ್ಯಕ್ರಿಯೆ

SSTV Profile Logo SStv July 14, 2025
ಚನ್ನಪಟ್ಟಣದ ದಶಾವರದಲ್ಲಿ ಬಿ. ಸರೋಜಾ ದೇವಿ ಅಂತ್ಯಕ್ರಿಯೆ
ಚನ್ನಪಟ್ಟಣದ ದಶಾವರದಲ್ಲಿ ಬಿ. ಸರೋಜಾ ದೇವಿ ಅಂತ್ಯಕ್ರಿಯೆ

ಅಭಿನಯ ಸರಸ್ವತಿ ಎಂದೇ ಖ್ಯಾತಿಯಾಗಿದ್ದ ಹಿರಿಯ ನಟಿ ಬಿ. ಸರೋಜಾ ದೇವಿ (87) ಇಂದು (ಜುಲೈ 14) ವಿಧಿವಶರಾಗಿದ್ದಾರೆ. ಮಂಗಳವಾರ (ಜುಲೈ 15) ಚನ್ನಪಟ್ಟಣದ ದಶಾವರದ ಕಣ್ವ ಡ್ಯಾಂ ಬಳಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಬೆಂಗಳೂರಿನ ಸ್ವಗೃಹದಲ್ಲಿ ನಾಳೆ ಬೆಳಿಗ್ಗೆ 11:30ರವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ ಎಂದು ಅವರ ಪುತ್ರ ಗೌತಮ್ ತಿಳಿಸಿದ್ದಾರೆ. ಬಳಿಕ ಚನ್ನಪಟ್ಟಣಕ್ಕೆ ಶವ ರವಾನೆ ಮಾಡಲಾಗುತ್ತದೆ.

1955ರಲ್ಲಿ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸರೋಜಾದೇವಿ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಅವರು ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಅಭಿನಯಿಸಿ ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು. ಪದ್ಮಭೂಷಣ ಪುರಸ್ಕೃತರಾದ ಅವರು ಡಾ. ರಾಜ್‌ಕುಮಾರ್, ಎಂಜಿಆರ್, ಶಿವಾಜಿ ಗಣೇಶನ್, ದಿಲೀಪ್ ಕುಮಾರ್ ಸೇರಿದಂತೆ ಅನೇಕ ದಿಗ್ಗಜರ ಜೊತೆಗೆ ನಟಿಸಿದ್ದರು. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗದಲ್ಲಿ ಶೂನ್ಯತೆ ಉಂಟಾಗಿದೆ.