Back to Top

ಅಶ್ಲೀಲ ಮೆಸೇಜ್ ಬಳಿಕ ರಮ್ಯಾಗೆ ಕ್ಷಮೆ ಕೇಳಿದ ಫ್ಯಾನ್ಸ್ – ದೂರು ವಾಪಸ್ ಮಾಡುವ ಮನವಿ ವೈರಲ್!

SSTV Profile Logo SStv July 30, 2025
ಕೇಸ್ ಹಿಂಪಡೆಯುವಂತೆ ರಮ್ಯಾಗೆ ದರ್ಶನ್ ಫ್ಯಾನ್ಸ್ ಮನವಿ
ಕೇಸ್ ಹಿಂಪಡೆಯುವಂತೆ ರಮ್ಯಾಗೆ ದರ್ಶನ್ ಫ್ಯಾನ್ಸ್ ಮನವಿ

ನಟಿಯ ರಮ್ಯಾ ವಿರುದ್ಧ ಕೆಟ್ಟದಾಗಿ ಮೆಸೇಜ್ ಕಳುಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ 44 ಜನರ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದೀಗ ಇದೇ ಅಕೌಂಟ್‌ಗಳಿಂದ ಮತ್ತೆ ಮೆಸೇಜ್ ಮಾಡಿ "ಕ್ಷಮಿಸಿ, ದೂರು ವಾಪಸ್ ತೆಗೆದುಕೊಳ್ಳಿ" ಎಂದು ಮನವಿ ಮಾಡಲಾಗುತ್ತಿದೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ನ್ಯಾಯ ಸಿಗಬೇಕೆಂದು ಆಗ್ರಹಿಸಿದ್ದ ರಮ್ಯಾ, ಆ ಬಗ್ಗೆ ಮಾಹಿತಿ ಹಂಚಿಕೊಂಡ ಕಾರಣದಿಂದ ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಅವಹೇಳನಕಾರಿ ಹಾಗೂ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ರಮ್ಯಾ, ಸ್ಕ್ರೀನ್‌ಶಾಟ್ ಸೇರಿದಂತೆ ತನಿಖಾ ಸಂಸ್ಥೆಗೆ ದೂರು ನೀಡಿದ್ದರು. ಈಗ ಅವರು ದೂರು ನೀಡಿದ್ದದ್ದರಿಂದ ಕೆಲವರು ಭಯಭೀತರಾಗಿ, ಕ್ಷಮೆ ಕೇಳುತ್ತಿದ್ದಾರೆ ಎಂಬ ವರದಿ ಬಂದಿದೆ.

ಇದೇ ವೇಳೆ, ದರ್ಶನ್ ಅಭಿಮಾನಿಗಳ ಹೃದಯವಂತ ತಂಡಗಳು ಸಾಮಾಜಿಕ ಜಾಲತಾಣಗಳಲ್ಲಿ "ಯಾರಿಗೂ ಕೆಟ್ಟದಾಗಿ ಮೆಸೇಜ್ ಮಾಡಬೇಡಿ, ವಿವಾದಕ್ಕೆ ತಲೆ ಕೊಡಬೇಡಿ" ಎಂಬ ಜಾಗೃತಿ ಸಂದೇಶವನ್ನು ಹರಡುತ್ತಿರುವುದು ಗಮನ ಸೆಳೆಯುತ್ತಿದೆ. "ಡಿಬಾಸ್ ಅಭಿಮಾನಿಗಳು ಸಮಾಜಮುಖಿ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಘಟನೆ ಇನ್ನು ಹೆಚ್ಚಿನ ಒಳ್ಳೆಯದಕ್ಕೆ ಪ್ರೇರಣೆಯಾಗಲಿ" ಎಂಬ ಹಂಬಲವೂ ವ್ಯಕ್ತವಾಗಿದೆ.