Back to Top

ಕೊಲೆ ಆರೋಪಿಯ ಬರ್ತ್‌‌ಡೇ ಪಾರ್ಟಿಯಲ್ಲಿ ಭಾಗವಹಿಸಿದ ನಟ ದರ್ಶನ್: ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ವಿಚಾರಣೆಯ ಮಧ್ಯೆ ಫೋಟೋ ವೈರಲ್!

SSTV Profile Logo SStv July 25, 2025
ಬಿಪಿನ್ ರೈ ಬರ್ತ್‌‌ಡೇ ಪಾರ್ಟಿಯಲ್ಲಿ ಭಾಗವಹಿಸಿದ ನಟ ದರ್ಶನ್
ಬಿಪಿನ್ ರೈ ಬರ್ತ್‌‌ಡೇ ಪಾರ್ಟಿಯಲ್ಲಿ ಭಾಗವಹಿಸಿದ ನಟ ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಈಗ ಹೊಸ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಥೈಲ್ಯಾಂಡ್‌ನ ಉದ್ಯಮಿ ಹಾಗೂ ಕೊಲೆ ಆರೋಪಿಗೆ ಸಂಬಂಧಿಸಿದ ಬಿಪಿನ್ ರೈ ಅವರ ಜನ್ಮದಿನ ಪಾರ್ಟಿಯಲ್ಲಿ ದರ್ಶನ್ ಭಾಗವಹಿಸಿರುವುದು ನೆಟ್ಟಿಗರಲ್ಲಿ ಶಾಕ್ ಮೂಡಿಸಿದೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

2014ರಲ್ಲಿ ಮಂಗಳೂರಿನಲ್ಲಿ ಅಬ್ದುಲ್ ಹಮೀದ್ ಎಂಬಾತನ ಕೊಲೆ ಪ್ರಕರಣದಲ್ಲಿ ಬಿಪಿನ್ ರೈ ವಿರುದ್ಧ ಸುಪಾರಿ ನೀಡಿದ ಆರೋಪವಿದೆ. ಈ ಸಂಬಂಧ ಜೈಲು ಶಿಕ್ಷೆ ಅನುಭವಿಸಿದ್ದ ಬಿಪಿನ್ ರೈ ಇದೀಗ ಥೈಲ್ಯಾಂಡ್‌ನಲ್ಲಿ ಉದ್ಯಮ ನಡೆಸುತ್ತಿದ್ದಂತೆ ವರದಿಯಾಗಿದೆ.

ಇದೀಗ, ನಟ ದರ್ಶನ್‌ ಈ ವ್ಯಕ್ತಿಯ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದು, ಅವರ ವಿರುದ್ಧ ಸಾಮಾಜಿಕಮಾಧ್ಯಮಗಳಲ್ಲಿ ಟೀಕೆ ಹರಿದುಬರುತ್ತಿದೆ. ಇದೇ ವೇಳೆ, ದರ್ಶನ್ ಸೇರಿ ಉಳಿದ ಏಳು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದ್ದು, ತೀರ್ಪು ಬರಲು ಕನಿಷ್ಠ 10 ದಿನಗಳು ಬೇಕಾಗಲಿದೆ.

ಬೆನ್ನುನೋವಿನ ನೆಪದಲ್ಲಿ ಮಧ್ಯಂತರ ಜಾಮೀನು ಪಡೆದು ಶೂಟಿಂಗ್‌ ಮಾಡುತ್ತಿರುವುದನ್ನು ರಾಜ್ಯ ಸರ್ಕಾರ ಪ್ರಶ್ನಿಸಿರುವುದರಿಂದ, ದರ್ಶನ್ ಅವರ ಜಾಮೀನಿಗೆ ತೀವ್ರ ತೀವ್ರ ವಿರೋಧ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಕೋರ್ಟ್ ತೀರ್ಪು ಎಂಥದ್ದಾಗುತ್ತದೆ ಎನ್ನುವುದು ಕುತೂಹಲದ ವಿಷಯವಾಗಿದೆ.