Back to Top

ಬಿಕ್ಲು ಶಿವ ಕೊಲೆ ಪ್ರಕರಣ: ಜಗ್ಗನಿಗೆ ಸಿನಿಮಾ ನಂಟು? ಸ್ಫೋಟಕ ವಿವರಗಳು ಬಯಲಾಗುತ್ತಿದೆ!

SSTV Profile Logo SStv July 22, 2025
ಬಿಕ್ಲು ಶಿವ ಕೊಲೆ ಪ್ರಕರಣ
ಬಿಕ್ಲು ಶಿವ ಕೊಲೆ ಪ್ರಕರಣ

ಬೆಂಗಳೂರು ನಗರದ ಖಾತೆ ಬುಕ್ಕಿಯಾದ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಸ್ಫೋಟಕ ಮಾಹಿತಿಗಳು ಹೊರ ಬರುತ್ತಿವೆ. ಕೊಲೆ ಆರೋಪಿ ಜಗದೀಶ್ ಅಲಿಯಾಸ್ ಜಗ್ಗ ಚಿತ್ರರಂಗದ ಹಲವಾರು ನಟ-ನಟಿಯರ ಜೊತೆ ನಂಟು ಹೊಂದಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಜಗ್ಗನಿಗೆ ನಟಿ ರಚಿತಾ ರಾಮ್ ಸೇರಿದಂತೆ ಸುದೀಪ್, ರವಿಚಂದ್ರನ್, ಜೈಜಗದೀಶ್‌ರ ಜೊತೆಗಿನ ಫೋಟೋಗಳು ವೈರಲ್ ಆಗಿವೆ. ಜಗ್ಗ, ರಚಿತಾರಾಮ್‌ಗೆ ಸೀರೆ, ಒಡವೆ ಗಿಫ್ಟ್ ನೀಡಿದ ಫೋಟೋಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ, ರಚಿತಾರಾಮ್ ಆಪ್ತ ಮೂಲಗಳು ಈ ಫೋಟೋಗಳು 'ರವಿ ಬೋಪಣ್ಣ' ಸಿನಿಮಾದ ಸಂದರ್ಭದಲ್ಲಿ ತೆಗೆಸಿಕೊಂಡದ್ದಾಗಿ ತಿಳಿದುಬಂದಿದೆ, ಜಗ್ಗನಿಂದ ಕೊಡುಗೆ ಇರಲಿಲ್ಲ ಎಂದು ಸ್ಪಷ್ಟನೆ ನೀಡಿವೆ.

ಕೊಲೆ ಕೃತ್ಯಕ್ಕೆ ಆರೋಪಿ ಕಿರಣ್, ಹುಡುಗರನ್ನು ಸಿದ್ಧಗೊಳಿಸಿದ್ದಾನೆ ಎಂಬುದು ಬಯಲಾಗಿದೆ. ಪ್ಯಾಟ್ರಿಕ್ ತಮಿಳು ಹುಡುಗರನ್ನು ತಂದು, ಭೀಕರವಾಗಿ ಬಿಕ್ಲು ಶಿವನ ಹತ್ಯೆ ನಡೆಸಿದ ಮಾಹಿತಿ ತನಿಖೆಯಿಂದ ದೃಢಪಟ್ಟಿದೆ.

ಜಗ್ಗನ ಮನೆ, ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸರು ಪಿಸ್ತೂಲ್ ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇತ್ತ ಭೈರತಿ ಬಸವರಾಜ್ ಬಂಧನಕ್ಕೆ ಕಾಂಗ್ರೆಸ್ ಆಗ್ರಹ ವ್ಯಕ್ತಪಡಿಸಿದ್ದು, ರಾಜಕೀಯರಂಗವೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕೊಲೆ ಪ್ರಕರಣ ಸಂಬಂಧ ಬಹುಮಾನ್ಯ ಆರೋಪಿಗಳ ವಿರುದ್ಧ ತನಿಖೆ ಇನ್ನೂ ಮುಂದುವರೆದಿದ್ದು, ನಟ-ನಟಿಯರ ಸಂಬಂಧಿತ ನಂಟುಗಳು ಇಡೀ ಪ್ರಕರಣಕ್ಕೆ ಹೊಸ ಧಾಖಲೆಗಳು ಸೇರಿಸುತ್ತಿದೆ.