Back to Top

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಗಲಾಟೆ, ಮನೆಯಲ್ಲಿ ಮಾತಿನ ಸಮರ

SSTV Profile Logo SStv November 26, 2024
ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಗಲಾಟೆ
ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಗಲಾಟೆ
ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಗಲಾಟೆ, ಮನೆಯಲ್ಲಿ ಮಾತಿನ ಸಮರ ಬಿಗ್ ಬಾಸ್ ಮನೆ ಮತ್ತೆ ನಾಮಿನೇಷನ್ ಟಾಸ್ಕ್‌ನಿಂದ ರಂಗೇರಿದೆ. ಉಗ್ರಂ ಮಂಜು ರಾಜಾತಿಥ್ಯದಲ್ಲಿ, ಪ್ರಜೆಗಳಿಗೆ ಬಿಗ್ ಬಾಸ್ ವಿಶೇಷ ಟಾಸ್ಕ್ ನೀಡಿದ್ದಾರೆ. ಬಿಲ್ಲು-ಬಾಣದ ಮೂಲಕ ನಾಮಿನೇಷನ್ ಮಾಡಲು ಮನೆಯಲ್ಲಿ ಭಾರೀ ಗಲಾಟೆ ಉಂಟಾಗಿದೆ. ಮೋಕ್ಷಿತಾ, ತ್ರಿವಿಕ್ರಮ್ ಮತ್ತು ಭವ್ಯಗೌಡರನ್ನು ನಾಮಿನೇಟ್ ಮಾಡುವ ವೇಳೆ ತ್ರಿವಿಕ್ರಮ್‌ ಬಗ್ಗೆ ತೀವ್ರ ಅಭಿಪ್ರಾಯ ವ್ಯಕ್ತಪಡಿಸಿದರು. ತ್ರಿವಿಕ್ರಮ್ ಇದನ್ನು ತಿರಸ್ಕರಿಸಿ, ಮೋಕ್ಷಿತಾ ಮತ್ತು ಉಗ್ರಂ ಮಂಜು ನಡುವಿನ ಬಂಡವಾಳ ಬಿಚ್ಚಿಟ್ಟರು. ಈ ಸಮಯದಲ್ಲಿ ಉಗ್ರಂ ಮಂಜು, "ನಂಬಿಕೆ ದ್ರೋಹ" ಎಂದು ಕೂಗಿದರು. ತ್ರಿವಿಕ್ರಮ್ ಪ್ರತಿಯಾಗಿ, ಉಗ್ರಂ ಮಂಜು ಅವರನ್ನು "ಗೋಮುಖ ವ್ಯಾಘ್ರ" ಎಂದು ಕಿಡಿಕಾರಿದ್ದು, ತಾವು "ಎರಡು ತಲೆ ನಾಗರಹಾವು" ಎಂದು ತಿರುಗೇಟು ನೀಡಿದ್ದಾರೆ. ಇದರಿಂದ ಮನೆಯ ವಾತಾವರಣ ಮತ್ತಷ್ಟು ಕಾರಣ ಎಂಬಂತಾಗಿದೆ. ನಾಮಿನೇಷನ್ ಟಾಸ್ಕ್ ಮನೆಗೆ ತೀವ್ರ ತಳಮಳ ತರಿಸಿದ್ದು, ಈ ವಾರ ಮನೆಯಿಂದ ಹೊರಗೆ ಹೋಗೋದು ಯಾರು ಎಂಬುದು ಕುತೂಹಲ ಮೂಡಿಸಿದೆ