Back to Top

‘ಗುಗ್ಗು ನನ್ನ ಮಗ’ ಎಂದ ರಜತ್, ಬಿಗ್ ಬಾಸ್ ಡೋರ್ ತೆಗೆಯಲು ಪಟ್ಟು ಹಿಡಿದ ಸುರೇಶ್

SSTV Profile Logo SStv November 20, 2024
ಬಿಗ್ ಬಾಸ್ ಡೋರ್ ತೆಗೆಯಲು ಪಟ್ಟು ಹಿಡಿದ ಸುರೇಶ್
ಬಿಗ್ ಬಾಸ್ ಡೋರ್ ತೆಗೆಯಲು ಪಟ್ಟು ಹಿಡಿದ ಸುರೇಶ್
‘ಗುಗ್ಗು ನನ್ನ ಮಗ’ ಎಂದ ರಜತ್, ಬಿಗ್ ಬಾಸ್ ಡೋರ್ ತೆಗೆಯಲು ಪಟ್ಟು ಹಿಡಿದ ಸುರೇಶ್ ಬಿಗ್ ಬಾಸ್ ಕನ್ನಡ 11ನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಪ್ರವೇಶಿಸಿದ ರಜತ್ ಮತ್ತು ಶೋಭಾ ಶೆಟ್ಟಿ ಮನೆಯ ಪರಿಸ್ಥಿತಿಯನ್ನು ತೀವ್ರಗೊಳಿಸಿದ್ದಾರೆ. ಇಂದಿನ ಟಾಸ್ಕ್ ವೇಳೆ ರಜತ್ ಮತ್ತು ಗೋಲ್ಡ್ ಸುರೇಶ್ ನಡುವೆ ಕಿಚ್ಚು ಹೊತ್ತಿದೆ. ಟಾಸ್ಕ್ ವೇಳೆ ರಜತ್, ಸುರೇಶ್‌ ಕುರಿತು ‘ಗುಗ್ಗು ನನ್ನ ಮಗ’, ‘ವೇಸ್ಟ್ ನನ್ನ ಮಗ’ ಎಂಬ ಪದಗಳನ್ನು ಬಳಸಿ ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ. ಸುರೇಶ್‌ ಈ ಪದಗಳಿಂದ ನೊಂದು, "ಇವನು ನನ್ನ ಅಪ್ಪನಲ್ಲ, ನಾನು ಆಟ ಆಡಲ್ಲ, ಬಾಗಿಲು ತೆಗೆಯಿರಿ" ಎಂದು ಬಿಗ್ ಬಾಸ್‌ ಬಳಿ ಒತ್ತಾಯಿಸಿದರು. ಕೋಪದಲ್ಲಿ ಬಿಗ್ ಬಾಸ್ ಡೋರ್ ತಟ್ಟಿದ ಅವರು, ಶಿಶಿರ್ ಮತ್ತು ಮೋಕ್ಷಿತಾ ಸಮಾಧಾನ ಪಡಿಸಿದರೂ ಕೇಳದ ಸ್ಥಿತಿಯಲ್ಲಿದ್ದರು. ಈ ಘಟನೆಯ ಪ್ರೋಮೋ ವೀಕ್ಷಕರಲ್ಲಿ ಕುತೂಹಲ ಹುಟ್ಟಿಸಿದ್ದು, ರಜತ್ ಮತ್ತು ಸುರೇಶ್ ನಡುವಿನ ಈ ಗಲಾಟೆ ಎಂತಹ ತಿರುವು ತಾಳಲಿದೆ ಎಂಬುದಕ್ಕೆ ಪ್ರೇಕ್ಷಕರು ಉತ್ಸುಕರಾಗಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳ ಆಗಮನದಿಂದ ‘ಬಿಗ್ ಬಾಸ್’ ಮನೆಯ ಪರಿಸ್ಥಿತಿ ಇನ್ನಷ್ಟು ರೋಚಕವಾಗುತ್ತಿದೆ.