'ಬ್ಯಾಂಗಲ್ ಬಂಗಾರಿ'ಗೆ ಭರ್ಜರಿ ರೆಸ್ಪಾನ್ಸ್ – 22 ದಿನದಲ್ಲಿ 10 ಮಿಲಿಯನ್ ವೀಕ್ಷಣೆ!


ಯುವರಾಜ್ ಕುಮಾರ್ ಮತ್ತು ಸಂಜನಾ ಆನಂದ್ ಅಭಿನಯದ 'ಎಕ್ಕ' ಸಿನಿಮಾದ 'ಬ್ಯಾಂಗಲ್ ಬಂಗಾರಿ' ಹಾಡು ಈಗ ಕನ್ನಡ ಸಂಗೀತ ಪ್ರೇಮಿಗಳ ಮನಸ್ಸನ್ನು ತುಂಬಿಕೊಂಡಿದೆ. ಬಿಡುಗಡೆ ಆದ ಕೇವಲ 22 ದಿನಗಳಲ್ಲಿ ಈ ಹಾಡು 10 ಮಿಲಿಯನ್ ವೀಕ್ಷಣೆಗಳನ್ನು ಹೊಂದಿ, ಯೂಟ್ಯೂಬ್‌ನ ಟಾಪ್ ಮ್ಯೂಸಿಕ್ ವಿಡಿಯೋಗಳಲ್ಲಿ 29ನೇ ಸ್ಥಾನವನ್ನು ಪಡೆದುಕೊಂಡಿದೆ.
ಆಂಟೊನಿ ದಾಸನ್ ಅವರ ಶಕ್ತಿಶಾಲಿ ಕಂಠದಿಂದ ಮೂಡಿಬಂದ ಈ ಗೀತೆ, ಈಗ ಆಟೊ, ಟ್ಯಾಕ್ಸಿ, ರೀಲ್ಸ್, ಇನ್‌ಸ್ಟಾಗ್ರಾಂ, ಈವೆಂಟ್‌ಗಳಲ್ಲೆಲ್ಲಾ ಕೇಳಿಬರುತ್ತಿದೆ. ಈಗಾಗಲೇ ಹಲವಾರು ಸೆಲೆಬ್ರಿಟಿಗಳು ಈ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಯುವಜನತೆಗೆ ಇದು ಫೇವರಿಟ್ ಹಾಡುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಹಾಡಿನ ಶ್ರೇಯ ಪೈಪೋಟಿಗೆ ಚರಣ್ ರಾಜ್ ಅವರ ಸಂಗೀತವೂ ದೊಡ್ಡ ಪಾತ್ರ ವಹಿಸಿದ್ದು, ಅವರ ಮ್ಯೂಸಿಕ್ ಒಮ್ಮೆ ಕೇಳಿದ್ರೆ ಮತ್ತೆ ಮತ್ತೆ ಕೇಳಿಸಿಕೊಳ್ಳೋ ಹಾಗೆ ಮೂಡಿಬಂದಿದೆ. ಹಾಡಿನಲ್ಲಿ ಯುವರಾಜ್ ಮತ್ತು ಸಂಜನಾಳ ಕೆಮಿಸ್ಟ್ರಿ ಅಭಿಮಾನಿಗಳನ್ನು ಖುಷಿಪಡಿಸುತ್ತಿದೆ.
'ಎಕ್ಕ' ಚಿತ್ರವನ್ನು ನಿರ್ದೇಶಿಸಿರುವವರು ರೋಹಿತ್ ಪದಕಿ, ನಿರ್ಮಾಣದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಸೇರಿ ಬೃಹತ್ ತಂಡ ತೊಡಗಿಸಿಕೊಂಡಿದೆ. ನಟ ಆದಿತ್ಯ, ಬಾಲಿವುಡ್ ಕಲಾವಿದ ಅತುಲ್ ಕುಲಕರ್ಣಿ, ನಟಿ ಸಂಪದಾ ಸೇರಿದಂತೆ ಬಹುಮುಖ ಪ್ರತಿಭೆಗಳು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರ ಜುಲೈ 18ರಂದು ಬಿಡುಗಡೆಯಾಗುತ್ತಿದ್ದು, ಯುವರಾಜ್ ಕುಮಾರ್ ಅವರ ಎರಡನೇ ಸಿನಿಮಾ ಇದಾಗಿದ್ದು, ಈಗಾಗಲೇ 'ಬ್ಯಾಂಗಲ್ ಬಂಗಾರಿ' ಹಾಡು ಚಿತ್ರದ ಹೈಪ್ ಅನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಾಡು ಈ ವರ್ಷದ ಗಣೇಶ ಹಬ್ಬದ ಹಿಟ್ ಹಾಡು ಆಗಿ ಮುಂದಾಗಲಿದೆ ಎನ್ನುವುದು ಖಚಿತ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
