Back to Top

"ಮೂರು ತಿಂಗಳಲ್ಲಿ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ!" – ಟ್ರಾಫಿಕ್ ಮುಕ್ತ ಬೆಂಗಳೂರು ಸಾಧ್ಯವೆ?"

SSTV Profile Logo SStv July 22, 2025
ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ
ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ

ಸಿಲಿಕಾನ್ ಸಿಟಿ ಬೆಂಗಳೂರು ಸಂಚಾರಿ ದಟ್ಟಣೆ ನಿವಾರಣೆಗೆ ಸುರಂಗ ಮಾರ್ಗ ನಿರ್ಮಾಣವೊಂದೆ ಇರುವಂತ ಪರ್ಯಾಂiiಮಾರ್ಗ ಎಂದು ಸರ್ಕಾರ ಹೇಳುತ್ತಿದೆ.  ಆದರೆ ಯಾವ ಸುರಂಗ ಮಾರ್ಗ ನಿರ್ಮಾಣದ ಅವಶ್ಯಕತೆ ಇಲ್ಲದೆ, ಕೇವಲ ಮೂರೇ ತಿಂಗಳಲ್ಲಿ ಇಡೀ ಬೆಂಗಳೂರಿನ ಸಂಚಾರಿ ದಟ್ಟಣೆಯನ್ನು ಶಾಶ್ವತವಾಗಿ ನಿವಾರಿಸಲು ಸಾಧ್ಯ ಎಂದು  ಶಿವಕುಮಾರ್.ಸಿಎಸ್.ಗೌಡ ಹೇಳಿದ್ದಾರೆ. ಇವರು ಮೂಲತ: ಕನಕಪುರದವರಾಗಿದ್ದು, ಡಬಲ್ ಪದವಿ ಹೊಂದಿದ್ದು, ’ಸಾಗುವ ದಾರಿಯಲ್ಲಿ’ ಚಿತ್ರ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.

  ಇಂದು ಮಾದ್ಯಮದವನ್ನು ಭೇಟಿ ಮಾಡಿ, ಕೆ.ಆರ್.ಮಾರ್ಕೆಟ್ ವೃತ್ತ, ಗೊರಗುಂಟೆಪಾಳ್ಯ ವೃತ್ತ, ಕೆ.ಆರ್.ಪುರಂ ತೂಗು ಸೇತುವೆ ಸೇರಿದಂತೆ ಪ್ರತಿ ಕೃತಿಗಳನ್ನು ಪ್ರದರ್ಶನ ಮಾಡುತ್ತಾ ಹೇಗೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದೆಂದು ಸೂತ್ರಗಳ ಸಮೇತ ವಿವರಣೆ ನೀಡಿದರು. ಸರ್ಕಾರ ಸಮಸ್ಯೆ ಪರಿಹಾರಕ್ಕೆ ಸಿದ್ದವಿದ್ದರೆ, ಇದೇ ಸೂತ್ರವನ್ನು ಕೊಡಲು ಸಿದ್ದನೆಂದು ಘಂಟಾಘೋಷವಾಗಿ ಆಹ್ವಾನಿಸಿದ್ದಾರೆ.