'ಅಪ್ಪಾಜಿ ತರ ಕಾಣ್ತೀಯಾ' ಅಂದರು – ವೇದ ಚಿತ್ರ ನೋಡಿ ಖುಷಿಪಟ್ಟಿದ್ದರು ನಾಗಮ್ಮ: ಶಿವಣ್ಣ ಭಾವುಕ ಪ್ರತಿಕ್ರಿಯೆ


ತಮಿಳುನಾಡಿನ ದೊಡ್ಡಗಾಜನೂರಿನಲ್ಲಿ ಡಾ.ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ ಅವರ ಅಂತ್ಯಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್ ಭಾವುಕರಾದರು. "ವೇದ" ಚಿತ್ರ ನೋಡಿ ‘ಅಪ್ಪಾಜಿ ತರ ಕಾಣ್ತೀಯಾ’ ಎಂದು ಖುಷಿಪಟ್ಟಿದ್ದರು ಎಂಬ ಮಾತು ನೆನೆಸಿ ನಟ ಭಾವನಾತ್ಮಕವಾಗಿ ಮಾತನಾಡಿದರು.
ಅಪ್ಪು ಹಾಗೂ ತಮ್ಮ ಸಿನಿಮಾಗಳನ್ನೆಲ್ಲಾ ಅವರು ನೋಡುವುದಾಗಿತ್ತು. ತಮ್ಮ ಮನೆಗೆ ತಾಯಿಯಷ್ಟೇ ಪ್ರೀತಿ ನೀಡಿದ ನಾಗಮ್ಮ ಅವರು, 93ನೇ ವಯಸ್ಸಿನಲ್ಲಿ ಶುಕ್ರವಾರ ಕೊನೆಯುಸಿರೆಳೆದರು. ಗಾಜನೂರಿನ ತೋಟದ ಮನೆ ಜಮೀನಿನಲ್ಲಿ ಈಡಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯುತ್ತಿದೆ.
ಶಿವಣ್ಣ, "ಅಮ್ಮ, ಅತ್ತೆ ಇಬ್ಬರೂ ಒಟ್ಟಿಗೆ ಬರುವ ದೃಶ್ಯ ಮರೆಯಲಾಗದು. ನನ್ನ ಜೀವನದಲ್ಲಿ ಅವರು ದೊಡ್ಡ ಪಾತ್ರ ವಹಿಸಿದ್ದರು" ಎಂದು ಭಾವನೆಗಳನ್ನು ಹಂಚಿಕೊಂಡರು.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
