Back to Top

ಭಾವುಕರಾದ ಅರ್ಜುನ್ ಸರ್ಜಾ: "ಸರೋಜಾದೇವಿಯಂತಹ ವ್ಯಕ್ತಿತ್ವ ಮತ್ತೆ ಸಿಗಲ್ಲ"

SSTV Profile Logo SStv July 15, 2025
ಅರ್ಜುನ್ ಸರ್ಜಾ ಭಾವುಕ ವೃತ್ತಾಂತ
ಅರ್ಜುನ್ ಸರ್ಜಾ ಭಾವುಕ ವೃತ್ತಾಂತ

ಹಿರಿಯ ನಟಿ ಬಿ. ಸರೋಜಾದೇವಿಯ ನಿಧನದ ಸುದ್ದಿ ಇಡೀ ಚಿತ್ರರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ನಟ ಅರ್ಜುನ್ ಸರ್ಜಾ ಅವರು ಸರೋಜಾದೇವಿ ಅಂತಿಮ ದರ್ಶನ ಪಡೆದು ಭಾವುಕರಾಗಿ ಮಾತನಾಡಿದರು.

"ಬಿ. ಸರೋಜಾದೇವಿ ಅವರು ಕನ್ನಡ ಚಿತ್ರರಂಗದ ಮಾತೃಸ್ವರೂಪ. ಅವರ ನಟನೆ, ವ್ಯಕ್ತಿತ್ವ, ಸೌಮ್ಯತೆ ಎಲ್ಲವೂ ಅಪರೂಪದವು. ರಾಜ್‌ಕುಮಾರ್, ಎಂಜಿಆರ್, ಶಿವಾಜಿ ಗಣೇಶನ್, ಎನ್‌ಟಿಆರ್ ಅವರಂತ ದೊಡ್ಡ ತಾರೆಯೊಂದಿಗೆ ನಟಿಸಿದ್ದರೂ ಕೂಡ, ಅವರು ಅತ್ಯಂತ ಸರಳ ವ್ಯಕ್ತಿತ್ವ ಹೊಂದಿದ್ದರು" ಎಂದು ಹೇಳಿದರು.

ಅರ್ಜುನ್ ಸರ್ಜಾ ತಮ್ಮ ಕುಟುಂಬದ ಜೊತೆಗಿನ ಆತ್ಮೀಯತೆಯನ್ನೂ ಸ್ಮರಿಸಿದರು: "ಅವರು ನಮ್ಮ ಮನೆಗೆ ಬಂದಾಗ 'ಮಗನೇ' ಎಂದು ಕರೆಯುತ್ತಿದ್ದರು. ಅವರನ್ನು ಕಂಡಾಗ ತಾಯಿಯ ತೃಪ್ತಿ ಬರುತ್ತಿತ್ತಿತ್ತು."

ಅಂತಿಮವಾಗಿ, "ಅವರು ಮಾಡಿದ ಸಮಾಜಸೇವೆ, ಅವರ ನಗೆಯು, ಅವರ ಹೃದಯದ ಒಳ್ಳೆಯತನ ನಾವು ಎಂದಿಗೂ ಮರೆತುಹೋಗಲ್ಲ. ಅವರಂತಹ ಮಹಿಳೆಯನ್ನು ಮತ್ತೆ ನೋಡುವುದು ಸಾಧ್ಯವಿಲ್ಲ" ಎಂದಿದ್ದಾರೆ ಅರ್ಜುನ್ ಸರ್ಜಾ.