'ಕೆ 47' ಟೀಸರ್ ರಿಲೀಸ್ – ಕಿಚ್ಚ ಸುದೀಪ್ ಮಾಸ್ ಲುಕ್‌ಗೂ, ಸ್ಟೈಲಿಷ್ ಎಂಟ್ರಿಗೆ ಫ್ಯಾನ್ಸ್ ಫುಲ್ ಖುಷಿ!


ಕಿಚ್ಚ ಸುದೀಪ್ ಮತ್ತು ‘ಮ್ಯಾಕ್ಸ್’ ಖ್ಯಾತ ನಿರ್ದೇಶಕ ವಿಜಯ್ ಕಾರ್ತಿಕೇಯ ಜೋಡಿಯ ಹೊಸ ಸಿನಿಮಾ 'ಕೆ 47' ಅಧಿಕೃತವಾಗಿ ಘೋಷಣೆಯಾಗಿದೆ. ಈ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಈಗಾಗಲೇ ಟೀಸರ್ ಬಿಡುಗಡೆಯಾಗಿದ್ದು, ಕಿಚ್ಚನ ಹೊಸ ಲುಕ್ ಮತ್ತು ಶೈಲಿಯ ಪ್ರಸ್ತುತಿ ನೋಡಿ ಫ್ಯಾನ್ಸ್ ಖುಷಿಯಲ್ಲಿದ್ದಾರೆ.
ಟೀಸರ್‌ನಲ್ಲಿ ಸುದೀಪ್ ಸಿಗರೇಟ್ ಸೇದುತ್ತಲೇ, ಲೈಟ್‌ಹೌಸ್ ಮೇಲೆ ದಾದಾ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. "ದಾದಾ ಯಾರ್ ಗೊತ್ತಾ? ದಾದಾನ ಪವರ್ ಏನ್ ಗೊತ್ತಾ?" ಎಂಬ ಹಾಡು, ಅವರ ಪಾತ್ರದ ತೀವ್ರತೆಯನ್ನು ತೋರಿಸುತ್ತದೆ. ಅನಿಮೇಷನ್ ಮೂಲಕ ಕಥೆಯ ಝಲಕ್ ನೀಡಲಾಗಿದ್ದು, ಮಾಸ್ ಎಂಟರ್ಟೈನರ್ ಆಗಿರೋ ಸೂಚನೆ ನೀಡಿದೆ.
ಜುಲೈ 7ರಿಂದ ಶೂಟಿಂಗ್ ಆರಂಭವಾಗಲಿದ್ದು, ಡಿಸೆಂಬರ್ 25ಕ್ಕೆ ಚಿತ್ರ ರಿಲೀಸ್ ಗುರಿಯಾಗಿದೆ. ಇದೊಂದು ಹೊಸ ಸಿನಿಮಾ ಆಗಿದ್ದು, ‘ಮ್ಯಾಕ್ಸ್’ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡುತ್ತಿದೆ. ಒಟ್ಟಾರೆ, 'ಕೆ 47' ಟೀಸರ್ ಕಿಚ್ಚ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ಆಗಿದೆ!
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
