Back to Top

ಪವಿತ್ರಾ ಗೌಡಗೆ ಜಾಮೀನು ಅಂಶಗಳನ್ನು ವಿವರಿಸಿದ ವಕೀಲರು

SSTV Profile Logo SStv December 13, 2024
ಅಂಶಗಳನ್ನು ವಿವರಿಸಿದ ವಕೀಲರು
ಅಂಶಗಳನ್ನು ವಿವರಿಸಿದ ವಕೀಲರು
ಪವಿತ್ರಾ ಗೌಡಗೆ ಜಾಮೀನು ಅಂಶಗಳನ್ನು ವಿವರಿಸಿದ ವಕೀಲರು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ ಅವರಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕಳೆದ ಆರು ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದ ಪವಿತ್ರಾ ಗೌಡ ಇದೀಗ ಬಿಡುಗಡೆಗೆ ಸಿದ್ಧರಾಗಿದ್ದಾರೆ. ಹಿರಿಯ ವಕೀಲ ಸೆಬಾಸ್ಟಿಯನ್ ಅವರ ನೇತೃತ್ವದಲ್ಲಿ ಪವಿತ್ರಾ ಪರ ವಾದ ಮಂಡಿಸಲಾಯಿತೆ. ವಕೀಲರು, ಪವಿತ್ರಾ ಗೌಡ ಈ ಪ್ರಕರಣದಲ್ಲಿ ಯಾವುದೇ ನೇರ ಪಾತ್ರವಹಿಸಿಲ್ಲ ಹಾಗೂ ಅಪಹರಣ ಅಥವಾ ಕೊಲೆ ಕೃತ್ಯಕ್ಕೆ ಸಹಕರಿಸಿಲ್ಲ ಎಂಬುದನ್ನು ವಾದಿಸಿದರು. ಇವುಗಳನ್ನು ಪರಿಗಣಿಸಿರುವ ನ್ಯಾಯಾಲಯ ಜಾಮೀನು ನೀಡಿದೆ ಎಂದು ವಕೀಲ ಶಿಲ್ಪಾ ತಿಳಿಸಿದ್ದಾರೆ. ಪವಿತ್ರಾ ಅವರ ತಾಯಿ, ಮಗಳಿಗೆ ಜಾಮೀನು ಸಿಕ್ಕಿರುವುದನ್ನು ಸಂತಸದಿಂದ ಸ್ವೀಕರಿಸಿದ್ದಾರೆ. ಜಾಮೀನು ಷರತ್ತುಗಳ ವಿವರ ನ್ಯಾಯಾಲಯದ ಆದೇಶದಿಂದ ಸ್ಪಷ್ಟವಾಗುವ ನಿರೀಕ್ಷೆಯಿದೆ. ಪವಿತ್ರಾ ಗೌಡ ಸೋಮವಾರ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.