ಅಮ್ಮ ಲೀಲಾವತಿಗಾಗಿ ಸ್ಮಾರಕ ನಿರ್ಮಿಸಿದ ವಿನೋದ್ ರಾಜ್


ಅಮ್ಮ ಲೀಲಾವತಿಗಾಗಿ ಸ್ಮಾರಕ ನಿರ್ಮಿಸಿದ ವಿನೋದ್ ರಾಜ್ ಹಿರಿಯ ನಟಿ ಡಾ. ಲೀಲಾವತಿ ಅವರ ಸ್ಮರಣೆಗಾಗಿ, ಅವರ ಪುತ್ರ ವಿನೋದ್ ರಾಜ್ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಅಮ್ಮನ ಸ್ಮಾರಕವನ್ನು ನಿರ್ಮಿಸಿದ್ದಾರೆ. ‘ತಾಯಿಯೇ ದೇವರು, ವರನಟಿ ಡಾ. ಲೀಲಾವತಿ ದೇಗುಲ’ ಎಂಬ ಹೆಸರಿನ ಈ ಸ್ಮಾರಕವನ್ನು ಡಿಸೆಂಬರ್ 5 ರಂದು ಸಚಿವ ಕೆ.ಎಚ್. ಮುನಿಯಪ್ಪ ಅವರಿಂದ ಉದ್ಘಾಟಿಸಲಾಯಿತು.
ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಹೋಮ-ಹವನ ನೆರವೇರಿಸಲಾಯಿತು. 60ಕ್ಕೂ ಹೆಚ್ಚು ಲೀಲಾವತಿಯವರ ಜೀವನದ ಅಮೂಲ್ಯ ಕ್ಷಣಗಳನ್ನು ಪ್ರತಿಬಿಂಬಿಸುವ ಫೋಟೋಗಳು ದೇಗುಲದಲ್ಲಿ ಅಳವಡಿಸಲ್ಪಟ್ಟಿದ್ದು, ಈ ಸ್ಮಾರಕವು ಲೀಲಾವತಿಯವರ ಅವಿಸ್ಮರಣೀಯ ಸಾಧನೆಗೆ ಶ್ರದ್ಧಾಂಜಲಿಯಾಗಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
