ಓಟಿಟಿ ಜಗತ್ತಿಗೆ ಶಾಕ್: ಉಲ್ಲು, ಆಲ್ಟ್ ಬಾಲಾಜಿ ಸೇರಿದಂತೆ 25 ಅಪ್ಲಿಕೇಶನ್‌ಗಳು ಭಾರತದಲ್ಲಿ ಬ್ಯಾನ್!


ಭಾರತದಲ್ಲಿ ಅಶ್ಲೀಲ ಕಂಟೆಂಟ್ ಪ್ರಸಾರ ಮಾಡುವ 25 ಒಟಿಟಿ ಮತ್ತು ಮನರಂಜನಾ ಅಪ್ಲಿಕೇಶನ್‌ಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಉಲ್ಲು, ಆಲ್ಟ್ ಬಾಲಾಜಿ, ದೇಸಿ ಫ್ಲಿಕ್ಸ್, ಹಾಟ್ ಎಕ್ಸ್ ವಿಐಪಿ, ಬೂಮೆಕ್ಸ್, ಬುಲ್ ಆಪ್ ಸೇರಿದಂತೆ ಹಲವು ಅಪ್ಲಿಕೇಶನ್‌ಗಳು ಈ ಪಟ್ಟಿಯಲ್ಲಿ ಸೇರಿವೆ.
ಮಾಹಿತಿ ಮತ್ತು ಪ್ರಸಾರ ಇಲಾಖೆ ನೀಡಿದ ಆದೇಶದ ಪ್ರಕಾರ, ಈ ಒಟಿಟಿಗಳು ಭಾರತೀಯ ಪ್ರಸಾರ ಕಾಯ್ದೆಗಳನ್ನು ಉಲ್ಲಂಘಿಸಿ ಅಶ್ಲೀಲ ಹಾಗೂ ಅನೈತಿಕ ಕಂಟೆಂಟ್‌ಗಳನ್ನು ವ್ಯಾಪಕವಾಗಿ ಪ್ರಸಾರ ಮಾಡುತ್ತಿದ್ದು, ಸಾಮಾಜಿಕ ರಚನೆಗೆ ಹಾನಿಕಾರಕವಾಗಿವೆ ಎಂಬ ಕಾರಣದಿಂದ ನಿಷೇಧಿಸಲಾಗಿದೆ.
ಬ್ಯಾನ್ ಆದ ಒಟಿಟಿಗಳು ಈಗ ಭಾರತದಲ್ಲಿ ಮಾತ್ರ ನಿಷೇಧಗೊಂಡಿದ್ದು, ಹೊರದೇಶಗಳಲ್ಲಿ ಇವು ಕಾರ್ಯನಿರ್ವಹಿಸುತ್ತಿರಬಹುದು. ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಅವರ ಆಲ್ಟ್ ಬಾಲಾಜಿಯೂ ಈ ಪಟ್ಟಿಯಲ್ಲಿದ್ದು, ಇವರು ಸೇರಿದಂತೆ ಇತರರು ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆಯೂ ಇದೆ. ಈ ನಿರ್ಧಾರOTT ಕ್ಷೇತ್ರದಲ್ಲಿ ಶಿಸ್ತು ಮತ್ತು ನೈತಿಕತೆಗೆ ದಾರಿಯೂದಿಯಾಗಲಿದೆ ಎಂಬ ನಿರೀಕ್ಷೆಯಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
