Back to Top

ಸಂಧ್ಯಾ ಥಿಯೇಟರ್​​ ಬಳಿ ಕಾಲ್ತುಳಿತದಿಂದ ಮಹಿಳೆ ಸಾವು ಪ್ರಕರಣ ನಟ ಅಲ್ಲು ಅರ್ಜುನ್ ಭೇಟಿಯಾದ ಸ್ಯಾಂಡಲ್​ವುಡ್ ನಟ ಉಪೇಂದ್ರ

SSTV Profile Logo SStv December 14, 2024
ಅಲ್ಲು ಅರ್ಜುನ್ ಭೇಟಿಯಾದ ಸ್ಯಾಂಡಲ್​ವುಡ್ ನಟ ಉಪೇಂದ್ರ
ಅಲ್ಲು ಅರ್ಜುನ್ ಭೇಟಿಯಾದ ಸ್ಯಾಂಡಲ್​ವುಡ್ ನಟ ಉಪೇಂದ್ರ
ಸಂಧ್ಯಾ ಥಿಯೇಟರ್​​ ಬಳಿ ಕಾಲ್ತುಳಿತದಿಂದ ಮಹಿಳೆ ಸಾವು ಪ್ರಕರಣ ನಟ ಅಲ್ಲು ಅರ್ಜುನ್ ಭೇಟಿಯಾದ ಸ್ಯಾಂಡಲ್​ವುಡ್ ನಟ ಉಪೇಂದ್ರ. ಹೈದರಾಬಾದ್‌ ಸಂಧ್ಯಾ ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಿಂದ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ತಮ್ಮ ದುಃಖವನ್ನು ವ್ಯಕ್ತಪಡಿಸಿದರು. ಜೂಬ್ಲಿ ಹಿಲ್ಸ್‌ನ ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ಈ ದುರ್ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆ ಅಲ್ಲ, ಆಕಸ್ಮಿಕವಾಗಿ ನಡೆದಿದೆ," ಎಂದು ಸ್ಪಷ್ಟನೆ ನೀಡಿದರು. ಅಲ್ಲು ಅರ್ಜುನ್ ರೇವತಿ ಕುಟುಂಬಕ್ಕೆ ಸಂತಾಪ ಸೂಚಿಸಿ, ಅವರಿಗೆ ಅಗತ್ಯವಾದ ಎಲ್ಲಾ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು. "ನಾನು 20 ವರ್ಷಗಳಿಂದ ಚಿತ್ರಮಂದಿರಕ್ಕೆ ಹೋಗುತ್ತಿದ್ದೇನೆ, ಆದರೆ ಇಂತಹ ದುರ್ಘಟನೆ ಎಂದಿಗೂ ನಡೆಯಿಲ್ಲ. ಕಾನೂನಿಗೆ ನಾನು ಗೌರವ ನೀಡುತ್ತೇನೆ," ಎಂದು ಅವರು ಹೇಳಿಕೆ ನೀಡಿದರು. ನಟ ಉಪೇಂದ್ರ ಹೈದರಾಬಾದ್‌ನಲ್ಲಿ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು, ಈ ಘಟನೆಯಿಂದ ಎದುರಾದ ಪರಿಸ್ಥಿತಿಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಲ್ಲು ಅರ್ಜುನ್ ತಮ್ಮ ಅಭಿಮಾನಿಗಳನ್ನು ಶಾಂತವಾಗಿರಲು ಕೋರಿದ್ದು, ತಮ್ಮ ಜೊತೆ ನಿಂತ ಕುಟುಂಬ ಹಾಗೂ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಟನ ತಕ್ಷಣದ ಪ್ರತಿಕ್ರಿಯೆ ಮತ್ತು ಸಹಾನುಭೂತಿ, ಪ್ರೇಕ್ಷಕರಲ್ಲಿ ಅಭಿಮಾನವನ್ನು ಹೆಚ್ಚಿಸಿದೆ.