ಆಲಿಯಾ ಭಟ್‌ಗೆ 77 ಲಕ್ಷ ರೂ. ಮೋಸ: ಆಪ್ತ ಸಹಾಯಕಿಯಿಂದಲೇ ದ್ರೋಹ!


ಬಾಲಿವುಡ್‌ನ ಪ್ರತಿಷ್ಠಿತ ನಟಿ ಮತ್ತು ನಿರ್ಮಾಪಕಿ ಆಲಿಯಾ ಭಟ್‌ಗೆ ಆಕೆಯ ಆಪ್ತ ಸಹಾಯಕಿಯೊಬ್ಬಳು 77 ಲಕ್ಷ ರೂಪಾಯಿಯ ವಂಚನೆ ಮಾಡಿರುವ ಪ್ರಕರಣ ಇದೀಗ ಸುದ್ದಿಯ ಕೇಂದ್ರಬಿಂದುವಾಗಿದೆ. ಬೆಂಗಳೂರಿನ ವೇದಿಕಾ ಪ್ರಕಾಶ್ ಶೆಟ್ಟಿ (32), 2021 ರಿಂದ 2024 ರವರೆಗೆ ಆಲಿಯಾ ಭಟ್ ಅವರ ಖಾಸಗಿ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಅವಧಿಯಲ್ಲಿ ಆಲಿಯಾರ ಖಾಸಗಿ ವ್ಯವಹಾರಗಳು ಮತ್ತು ನಿರ್ಮಾಣ ಸಂಸ್ಥೆ ಎಟರ್ನಲ್ ಸನ್‌ಶೈನ್ ನ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಆಲಿಯಾ ಭಟ್ ಅವರ ತಾಯಿ ಸೋನಿ ರಜ್ದಾನ್ ಅವರು ಮುಂಬೈನ ಜುಹು ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ, ವೇದಿಕಾ 2022 ರಿಂದ 2024ರ ಅವಧಿಯಲ್ಲಿ ನಕಲಿ ಬಿಲ್ಲುಗಳು, ಸಹಿ ನಕಲು ಹಾಗೂ ಆಲಿಯಾರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ₹76.9 ಲಕ್ಷ ವಂಚಿಸಿದ್ದಾರೆ. ಈ ಹಣವನ್ನು ಮೊದಲಿಗೆ ತಮ್ಮ ಗೆಳತಿಯ ಖಾತೆಗೆ ವರ್ಗಾಯಿಸಿ, ನಂತರ ತನ್ನ ಖಾತೆಗೆ ತರುವ ರೀತಿಯಲ್ಲಿ ಹಣದ ಹಾದಿ ಬದಲಾವಣೆ ಮಾಡಿದ್ದರು.
ಘಟನೆ ಬೆಳಕಿಗೆ ಬಂದ ಕೂಡಲೆ ವೇದಿಕಾ ಪರಾರಿಯಾಗಿದ್ದರು. ಪೊಲೀಸರು ಐದು ತಿಂಗಳ ತನಿಖೆಯ ನಂತರ ಇತ್ತೀಚೆಗೆ ಅವರನ್ನು ಬೆಂಗಳೂರು ನಗರದಿಂದ ಬಂಧಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಜುಲೈ 20ರವರೆಗೆ ಅವರು ಪೊಲೀಸರ ವಶದಲ್ಲಿದ್ದಾರೆ. ಅವರ ವಿರುದ್ಧ ಸಾಂಸ್ಥಿಕ ವಂಚನೆ, ನಕಲಿ ದಾಖಲೆ ಸೃಷ್ಟಿ, ವಿಶ್ವಾಸ ಭಂಗ ಇತ್ಯಾದಿ ಆರೋಪಗಳ ಮೇಲೆ ತನಿಖೆ ಮುಂದುವರೆದಿದೆ.
ಆಲಿಯಾ ಭಟ್, ತಮ್ಮ ನಿರ್ಮಾಣ ಸಂಸ್ಥೆ ಎಟರ್ನಲ್ ಸನ್‌ಶೈನ್ ಮೂಲಕ 'ಡಾರ್ಲಿಂಗ್ಸ್', 'ಜಿಗ್ರಾ' ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಪ್ರಸ್ತುತ ಅವರು ಪತಿ ರಣ್‌ಬೀರ್ ಕಪೂರ್ ಜೊತೆಗೆ ‘ಲವ್ ಅಂಡ್ ವಾರ್’ ಎಂಬ ಪ್ರಸ್ತುತ ಚಿತ್ರೀಕರಣದಲ್ಲಿರುವ ಚಿತ್ರದಲ್ಲಿಯೂ ಹಾಗೂ ‘ಆಲ್ಫಾ’ ಎಂಬ ಆಕ್ಷನ್ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ.
ಈ ಘಟನೆ ಚಿತ್ರರಂಗದಲ್ಲಿ ಸೆಕ್ಯೂರಿಟಿ ಮತ್ತು ನಂಬಿಕೆಯ ವಿಷಯಗಳ ಬಗ್ಗೆ ಚರ್ಚೆಗೆ ಕಾರಣವಾಗಿದ್ದು, ಸ್ಟಾರ್‌ಗಳ ಆಪ್ತ ವಲಯದಲ್ಲಿ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಪ್ರಕ್ರಿಯೆಗೆ ಕಠಿಣ ಕ್ರಮದ ಅಗತ್ಯವಿದೆ ಎಂಬಂತೆ ಅಭಿಪ್ರಾಯ ವ್ಯಕ್ತವಾಗುತ್ತಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
