Back to Top

ಐಶ್ವರ್ಯಾ ಮಾತಿಗೆ ನಾಚಿದ ಶಿಶಿರ್ ಬಿಗ್ ಬಾಸ್ ಮನೆಗೆ ಲವ್ ಸೀನ್

SSTV Profile Logo SStv November 9, 2024
ಐಶ್ವರ್ಯಾ ಮಾತಿಗೆ ನಾಚಿದ ಶಿಶಿರ್
ಐಶ್ವರ್ಯಾ ಮಾತಿಗೆ ನಾಚಿದ ಶಿಶಿರ್
ಐಶ್ವರ್ಯಾ ಮಾತಿಗೆ ನಾಚಿದ ಶಿಶಿರ್ ಬಿಗ್ ಬಾಸ್ ಮನೆಗೆ ಲವ್ ಸೀನ್ ಬಿಗ್ ಬಾಸ್ ಕನ್ನಡ ಸೀಸನ್ 11 ನಲ್ಲಿ ಪ್ರೇಮಕಥೆಗಳು ಹಬ್ಬುತ್ತಿವೆ. ಶೋ ಆರಂಭವಾಗಿ 40 ದಿನಗಳು ಕಳೆದಿದ್ದು, ಕೆಲವು ಸ್ಪರ್ಧಿಗಳು ತಮ್ಮ ಪ್ರೀತಿಯಿಂದ ಗಮನ ಸೆಳೆದಿದ್ದಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ, ಶಿಶಿರ್ ಮತ್ತು ಐಶ್ವರ್ಯಾ ಸಿಂಧೋಗಿ ನಡುವಿನ ಮಾತುಕಥೆ ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದೆ. ಸೇಮ್ ನಿಮ್ಮ ರೀತಿ ಇದ್ದರೆ ಓಕೆ ಶಿಶಿರ್, ಐಶ್ವರ್ಯಾಗೆ "ಹುಡುಗ ನನ್ನಂತಹ ಇದ್ದರೆ ಓಕೆನಾ?" ಎಂದು ಕೇಳಿದಾಗ, ಐಶ್ವರ್ಯಾ ತಕ್ಷಣ "ಸೇಮ್ ನಿಮ್ಮ ರೀತಿ ಇದ್ದರೆ ಓಕೆ, ಸ್ವಲ್ಪವೂ ಬದಲಾವಣೆ ಇರಬಾರದು" ಎಂದು ಉತ್ತರಿಸಿದರು. ಈ ಮಾತಿಗೆ ಶಿಶಿರ್ ನಾಚಿ ನೀರಾಗಿದ್ದು, ಅವರಿಬ್ಬರ ನಡುವೆ ದಿನದಿಂದ ದಿನಕ್ಕೆ ಪ್ರೀತಿ ಹೆಚ್ಚುತ್ತಿದೆ. ಐಶ್ವರ್ಯಾ ಮತ್ತು ಶಿಶಿರ್ ನಡುವಿನ ಈ ಕ್ಯೂಟ್ ಕ್ಷಣ ಪ್ರೇಕ್ಷಕರ ಮನ ಸೆಳೆಯುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಶಿಶಿರ್ ತೀವ್ರವಾಗಿ ಆಟವಾಡುತ್ತಾ, ಫ್ಲರ್ಟ್ ಮಾಡುತ್ತಾ ಲವರ್ ಬಾಯ್ ಇಮೇಜ್ ಕಟ್ಟಿಕೊಂಡಿದ್ದಾರೆ. ಧರ್ಮ ಕೀರ್ತಿರಾಜ್ ಮತ್ತು ಅನುಷಾ ರೈ ಕೂಡ ಆಪ್ತವಾಗಿದ್ದು, ಈ ದೃಶ್ಯ ನೋಡಿ ಶಿಶಿರ್, "ನಾನು ಕೂಡ ನಿನ್ನನ್ನು ಹಾಗೇ ನೋಡಲೇ?" ಎಂದು ಐಶ್ವರ್ಯಾಗೆ ಪ್ರಶ್ನೆ ಮಾಡಿದರು. ಐಶ್ವರ್ಯಾ, "ಹೀಗೆ ನೋಡಿದರೆ ಕೃತಕ ಎನಿಸುತ್ತದೆ," ಎಂದು ಹೇಳಿ ಹೊಟ್ಟೆ ನಗಿಸಿದರು. ಬಿಗ್ ಬಾಸ್ ಮನೆಯಲ್ಲಿ ಇಂತಹ ಪ್ರೇಮಕಥೆಗಳು ಪ್ರೇಕ್ಷಕರಿಗೆ ವಿಶೇಷ ಆಕರ್ಷಣೆಯಾಗಿದ್ದು, ಇವರಿಬ್ಬರ ಸಂಬಂಧ ನಿಜವಾಗಿಯೂ ಪ್ರೀತಿಯೇ ಅಥವಾ ಆಟದ ಒಂದು ಭಾಗವೇ ಎನ್ನುವುದು ಸಮಯ ಮಾತ್ರ ಹೇಳುತ್ತದೆ.