Back to Top

ಅಭಿಷೇಕ್ ಅವಿವಾ ಕ್ಯೂಟ್ ಫೋಟೋಶೂಟ್ ವೈರಲ್

SSTV Profile Logo SStv December 23, 2024
ಅಭಿಷೇಕ್ ಅವಿವಾ ಕ್ಯೂಟ್ ಫೋಟೋಶೂಟ್
ಅಭಿಷೇಕ್ ಅವಿವಾ ಕ್ಯೂಟ್ ಫೋಟೋಶೂಟ್
ಅಭಿಷೇಕ್ ಅವಿವಾ ಕ್ಯೂಟ್ ಫೋಟೋಶೂಟ್ ವೈರಲ್ ಸ್ಯಾಂಡಲ್​ವುಡ್ ಸ್ಟಾರ್ ಅಭಿಷೇಕ್ ಅಂಬರೀಷ್ ಹಾಗೂ ಪತ್ನಿ ಅವಿವಾ ಅವರ ಹೊಸ ಫೋಟೋಶೂಟ್‌ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ಜೋಡಿ ವೈಟ್ & ವೈಟ್‌ ಆಪ್ತ ಶೈಲಿಯಲ್ಲಿ ಫೋಟೋಸ್ ತೆಗೆಸಿಕೊಂಡಿದ್ದು, ಅವಿವಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಅಭಿಷೇಕ್ ಕ್ರೀಮ್ ಕಲರ್ ಕುರ್ತಾ ಧರಿಸಿದ್ದರೆ, ಅವಿವಾ ಬಿಳಿ ಸೀರೆ, ಮಲ್ಲಿಗೆ ಮುತ್ತಿನ ಆಭರಣ ಮತ್ತು ಆಕರ್ಷಕ ಹೆರ್ ಬನ್‌ನಲ್ಲಿ ಮಿಂಚಿದ್ದಾರೆ. ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನಿಂತ ರೊಮ್ಯಾಂಟಿಕ್ ಪೋಸ್‌ಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ಮಾಮ್ & ಡ್ಯಾಡ್ ಎಂದು ಕ್ಯಾಪ್ಷನ್ ಹಾಕಿ ಶೇರ್ ಮಾಡಿದ್ದ ಈ ಫೋಟೋಸ್ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚಿಗೆ ಗಂಡು ಮಗುವಿನ ಪೋಷಕರಾದ ಈ ದಂಪತಿ ಕುಟುಂಬದೊಂದಿಗೆ ಖುಷಿ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅವಿವಾ ತಮ್ಮ ನಿಶ್ಚಿತಾರ್ಥ, ಮದುವೆ, ಸೀಮಂತ ಸೇರಿದಂತೆ ಕುಟುಂಬ ಕಾರ್ಯಕ್ರಮಗಳ ಫೋಟೋಗಳನ್ನು ಸದಾ ಶೇರ್ ಮಾಡುತ್ತಿರುತ್ತಾರೆ. ಅಭಿಷೇಕ್ ಮತ್ತು ಅವಿವಾ ಅವರ ಈ ಹೊಸ ಫೋಟೋಶೂಟ್ ಅಭಿಮಾನಿಗಳಿಂದ "ಸೂಪರ್," "ಬ್ಯೂಟಿಫುಲ್ ಜೋಡಿ" ಎಂಬ ಕಮೆಂಟ್‌ಗಳನ್ನು ಪಡೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್ ಆಗಿದೆ.