“ಸಿಎಂ ಸಿದ್ದರಾಮಯ್ಯ ಹೃದಯಸ್ಪರ್ಶಿ ಅಂತಿಮ ದರ್ಶನ: ‘ಅಭಿನಯ ಸರಸ್ವತಿ’ಗೆ ಕರ್ತವ್ಯ ಪೂಜೆಯ ಜೊತೆಗೆ ಸರ್ಕಾರಿ ಗೌರವ!”


ಹಿರಿಯ ನಟಿ 'ಅಭಿನಯ ಸರಸ್ವತಿ' ಬಿ. ಸರೋಜಾ ದೇವಿ ನಿಧನದ ಹಿನ್ನೆಲೆ, ಸಿಎಂ ಸಿದ್ದರಾಮಯ್ಯ ಅವರು ಮಲ್ಲೇಶ್ವರಂನಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಿಎಂ, “ಅವರು ಬಹುಭಾಷಾ ಮೇರು ನಟಿ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ತುಂಬಲಾರದ ನಷ್ಟ,” ಎಂದು ಭಾವನೆ ವ್ಯಕ್ತಪಡಿಸಿದರು.
ಸರೋಜಾದೇವಿಗೆ ಎಲ್ಲ ಭಾಷೆಯ ತಾರೆಯರೊಂದಿಗೆ ನಟನೆಯ ಅನುಭವವಿದ್ದು, ಈ ಹಿಂದೆ ಎಂಜಿಆರ್, ಎಂಟಿಆರ್, ರಾಜ್‌ಕುಮಾರ್, ಶಿವಾಜಿ ಗಣೇಶನ್ ಅವರ ಜೊತೆ ಚಿತ್ರಗಳಲ್ಲಿ ಅಭಿನಯಿಸಿದ್ದರು.
ಇದೀಗ ರಾಮನಗರದ ದಶವಾರ ಗ್ರಾಮದಲ್ಲಿ ಅವರ ತಾಯಿ ಸಮಾಧಿ ಪಕ್ಕದಲ್ಲಿ, ಒಕ್ಕಲಿಗ ಸಂಪ್ರದಾಯದಂತೆ ಮಧ್ಯಾಹ್ನ 1.30ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ. ಜಿಲ್ಲಾಡಳಿತದಿಂದ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ನೀಡಲಾಗುವುದು.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
