Back to Top

ಯುಐ' ಸಿನಿಮಾ ಅರ್ಥವಾಗದಿದ್ದರೂ, ಅಭಿಮಾನಿಗಳ ಮೆಚ್ಚುಗೆ ಗಳಿಸಿದ ಉಪೇಂದ್ರನ ನಿರೂಪಣಾ ಶೈಲಿ

SSTV Profile Logo SStv December 20, 2024
ಅಭಿಮಾನಿಗಳ ಮೆಚ್ಚುಗೆ ಗಳಿಸಿದ ಉಪೇಂದ್ರನ ನಿರೂಪಣಾ ಶೈಲಿ
ಅಭಿಮಾನಿಗಳ ಮೆಚ್ಚುಗೆ ಗಳಿಸಿದ ಉಪೇಂದ್ರನ ನಿರೂಪಣಾ ಶೈಲಿ
ಯುಐ' ಸಿನಿಮಾ ಅರ್ಥವಾಗದಿದ್ದರೂ, ಅಭಿಮಾನಿಗಳ ಮೆಚ್ಚುಗೆ ಗಳಿಸಿದ ಉಪೇಂದ್ರನ ನಿರೂಪಣಾ ಶೈಲಿ ಉಪೇಂದ್ರ ನಿರ್ದೇಶನದ 'ಯುಐ' ಸಿನಿಮಾ ಡಿಸೆಂಬರ್ 20 ರಂದು ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿರುವ ಈ ಚಿತ್ರಕ್ಕೆ ಮೊದಲ ದಿನವೇ ಉತ್ತಮ ಓಪನಿಂಗ್ ಸಿಕ್ಕಿದೆ. ಮುಂಜಾನೆಯ ಶೋಗಳು ಹೌಸ್‌ಫುಲ್‌ ಆಗಿದ್ದು, ಉಪ್ಪಿ ಅಭಿಮಾನಿಗಳು ಚಿತ್ರವನ್ನು ಬೆಂಬಲಿಸಿದ್ದಾರೆ. ಆರಂಭದಲ್ಲೇ ಪ್ರೇಕ್ಷಕರನ್ನು ಗೊಂದಲಕ್ಕೀಡು ಮಾಡುವ ಶೈಲಿಯನ್ನು ಉಪೇಂದ್ರ ಬಳಸಿದ್ದಾರೆ. "ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದು ಹೋಗಿ" ಎಂಬ ಡೈಲಾಗ್ ಚಿತ್ರದ ನಿರೂಪಣೆಯ ಗಂಭೀರತೆಯನ್ನು ಇಂಗಿತಪಡಿಸುತ್ತದೆ. ಇದರಿಂದಾಗಿ ಚಿತ್ರಮಂದಿರದಲ್ಲಿ ಪ್ರೇಕ್ಷಕರಲ್ಲಿ ಕುತೂಹಲವಷ್ಟೇ ಅಲ್ಲ, ಚರ್ಚೆಯೂ ಹುಟ್ಟಿಸಿದೆ. ಚಿತ್ರದ ಕಥೆ ಮತ್ತು ತತ್ವಜ್ಞಾನವು ಪ್ರತಿ ವ್ಯಕ್ತಿಯ ಮೆದುಳಿಗೆ ಕೈ ಹಾಕುವ ಪ್ರಯತ್ನ ಮಾಡಿದ್ದು, ಕೆಲವರಿಗೆ ಮೊದಲ ಬಾರಿ ಅರ್ಥವಾಗಿಲ್ಲ. "ಇದು ಸಿನಿಮಾ ಮಾತ್ರವಲ್ಲ, ರಿಯಾಲಿಟಿ" ಎಂದು ಅಭಿಮಾನಿಗಳು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಉಪೇಂದ್ರ ಅವರ ಅಭಿನಯ, ಕಥೆಗಾರಿಕೆ, ಮತ್ತು ಅವರ ವಿಶಿಷ್ಟ ಶೈಲಿ ಸಿನಿಮಾದ ಪ್ರಮುಖ ಹೈಲೈಟ್ ಆಗಿದೆ. ಚಿತ್ರದ ಸಂಗೀತ ಅಜನೀಶ್ ಬಿ. ಲೋಕನಾಥ್ ನೀಡಿದ್ದು, ರೀಷ್ಮಾ ನಾಣಯ್ಯ, ರವಿಶಂಕರ್, ಅಚ್ಯುತ್ ಕುಮಾರ್, ಸಾಧು ಕೋಕಿಲ ಅವರಂತಹ ತಾರೆಗಳು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 'ಯುಐ' ಸಿನಿಮಾ ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ವಿಭಿನ್ನ ಕಥನಶೈಲಿಗೆ ಮೆಚ್ಚುಗೆ ಗಳಿಸಿದೆ. ಯುಐ ಸಿನಿಮಾ ಉಪೇಂದ್ರನ ಅಭಿಮಾನಿಗಳಿಗೆ ಔಟ್‌ ಆಫ್ ದಿ ಬಾಕ್ಸ್ ಚಿತ್ರವಾಗಿದ್ದು, ಪ್ರೇಕ್ಷಕರಿಗೆ ಪೂರ್ತಿಯಾಗಿ ಅರ್ಥವಾಗಲು ಒಂದು ಸಲಕ್ಕಿಂತ ಹೆಚ್ಚು ಸಲ ನೋಡಬೇಕಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.