Back to Top

‘A’ ಸಿನಿಮಾ ರಿಲೀಸ್‌ಗೆ ಕಾರಣವೇ ನಟಿ ಬಿ. ಸರೋಜಾ ದೇವಿ: ಉಪೇಂದ್ರ ಭಾವನಾತ್ಮಕ ಪ್ರತಿಕ್ರಿಯೆ

SSTV Profile Logo SStv July 14, 2025
‘A’ ಸಿನಿಮಾ ರಿಲೀಸ್‌ಗೆ ಕಾರಣವೇ ನಟಿ ಬಿ. ಸರೋಜಾ ದೇವಿ
‘A’ ಸಿನಿಮಾ ರಿಲೀಸ್‌ಗೆ ಕಾರಣವೇ ನಟಿ ಬಿ. ಸರೋಜಾ ದೇವಿ

ಹಿರಿಯ ನಟಿ ಬಿ. ಸರೋಜಾ ದೇವಿ ಅವರ ನಿಧನದ ಸುದ್ದಿ ಕನ್ನಡ ಚಿತ್ರರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಅವರ ಅಂತಿಮ ದರ್ಶನಕ್ಕಾಗಿ ಅವರ ನಿವಾಸಕ್ಕೆ ಆಗಮಿಸಿದ್ದ ನಟ ಉಪೇಂದ್ರ, ತಮ್ಮ ನೆನಪುಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡರು.

“ನನ್ನ 'A' ಸಿನಿಮಾಗೆ ಸೆನ್ಸಾರ್ ಸಮಸ್ಯೆ ಆಗಿದ್ದಾಗ, ಅದು ರಿವೈಸಿಂಗ್ ಕಮಿಟಿಗೆ ಹೋಗಿತ್ತು. ಅಲ್ಲಿ ಅಧ್ಯಕ್ಷೆಯಾಗಿದ್ದ ಸರೋಜ ಅಮ್ಮ, ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿ, ನನ್ನ ಪರವಾಗಿ ವಾದ ಮಾಡಿದ್ದರು. ಅವರ ಆಶೀರ್ವಾದದಿಂದಲೇ ಸಿನಿಮಾ ಬಿಡುಗಡೆಯಾಗಲಾಯಿತು,” ಎಂದು ಉಪೇಂದ್ರ ಕಣ್ಣೀರಿನಿಂದ ಹೇಳಿದರು.

ಅವರು ತಮ್ಮನ್ನು ಕುಟುಂಬ ಸ್ನೇಹಿತರಂತೆ ಕಾಣುತ್ತಿದ್ದರು. "ಸರೋಜಮ್ಮ ಜೀವನವನ್ನೆ ಒಂದು ಪಾಠವಾಗಿ ನಡೆಸಿದವರು. ಅವರ ಮಾತು, ನಗು, ಸಹಾನುಭೂತಿ ಎಲ್ಲವೂ ನಿರಂತರ ನೆನಪಾಗುತ್ತದೆ," ಎಂದು ಉಪೇಂದ್ರ ಹೇಳಿದರು.

'ಅಭಿನಯ ಸರಸ್ವತಿ' ಎಂದೇ ಪ್ರಸಿದ್ಧರಾಗಿದ್ದ ಬಿ. ಸರೋಜಾ ದೇವಿ ಅವರು ಕನ್ನಡ ಚಿತ್ರರಂಗದ ಮೊದಲ ಸೂಪರ್‌ಸ್ಟಾರ್ ನಟಿಯರಲ್ಲೊಬ್ಬರು. ಅವರ ನಂಬಲಸಾಧ್ಯ ಕೊಡುಗೆ ಭಾರತೀಯ ಚಿತ್ರರಂಗದಲ್ಲಿ ಎಂದಿಗೂ ಮರೆಯಲಾಗದು.