"ಸಾಯುವ ಮೊದಲು ಏನಾಯಿತು? ನಟಿ ಸರೋಜಾ ದೇವಿಯ ಕೊನೆಯ ಕ್ಷಣಗಳ ವಿವರ ಹೊರಬಂದಿದೆ"


ಇದೀಗ (ಜುಲೈ 14) ಹಿರಿಯ ನಟಿ ಬಿ. ಸರೋಜಾ ದೇವಿ ಅವರು 87ನೇ ವಯಸ್ಸಿನಲ್ಲಿ ನಿಧನರಾದರು ಎಂಬ ದುಃಖದ ಸುದ್ದಿ ಕನ್ನಡ ಚಿತ್ರರಂಗವನ್ನು ಆಘಾತಕ್ಕೀಡುಮಾಡಿದೆ. ಅವರ ಕೊನೆಯ ಕ್ಷಣಗಳ ವಿವರ ಇಂತಿದೆ:
ಬೆಂಗಳೂರಿನ ತಮ್ಮ ನಿವಾಸದಲ್ಲೇ ಇರುತ್ತಿದ್ದ ಸರೋಜಾ ದೇವಿ ಅವರು, ಬೆಳಗ್ಗೆ ಏಕಾಏಕಿ ತಲೆಸುತ್ತಿಗೆ ಒಳಗಾಗಿ ನೆಲಕ್ಕು ಬಿದ್ದರು. ತಕ್ಷಣವೇ ಮನೆದವರು ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಅವರು ದೇಹತ್ಯಾಗ ಮಾಡಿಕೊಂಡಿದ್ದರು. ವೈದ್ಯರು ಬೆಳಿಗ್ಗೆ 8:30 ಕ್ಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಅವರ ಪಾರ್ಥಿವ ಶರೀರವನ್ನು ಬೆಳಿಗ್ಗೆ 9:30ಕ್ಕೆ ಮನೆಗೆ ತಂದು ಇಡಲಾಯಿತು. ನಾಳೆ (ಜುಲೈ 15) ಅಂತ್ಯಕ್ರಿಯೆ ನಡೆಯಲಿದೆ. ಸರೋಜಾ ದೇವಿ ಅವರ ಪತಿ ಹರ್ಷ 1986 ರಲ್ಲೇ ನಿಧನರಾಗಿದ್ದರು. ಅವರು ತಮ್ಮ ಅಕ್ಕನ ಮೊಮ್ಮಕ್ಕಳನ್ನು ದತ್ತು ಪಡೆದುಕೊಂಡು ಸಾಕಿದ್ದರು. ಅವರಿಗಿಬ್ಬರು ದತ್ತು ಮಕ್ಕಳಿದ್ದಾರೆ.
ಅಭಿನಯದಲ್ಲಿ ಅಪಾರ ಕೊಡುಗೆ ನೀಡಿದ್ದ ಬಿ. ಸರೋಜಾ ದೇವಿ ಅವರ ನಿಧನಕ್ಕೆ ಚಿತ್ರರಂಗದ ಕಲಾವಿದರು, ರಾಜಕೀಯ ಮುಖಂಡರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅವರ ನುಡಿಗಳು, ನೆನಪುಗಳು ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಸದಾ ಜೀವಂತವಾಗಿರಲಿವೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
