50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ನಟ ಸೂರ್ಯ – ಐದು ಭಾಷೆಗಳಲ್ಲಿ ರಿಲೀಸ್ ಆದ ‘ಕರುಪ್ಪು’ ಟೀಸರ್


ತಮಿಳು ಸಿನಿಮಾ ರಂಗದ ಸ್ಟಾರ್ ನಟ ಸೂರ್ಯ ತಮ್ಮ 50ನೇ ಜನ್ಮದಿನವನ್ನು ಜುಲೈ 23ರಂದು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಸಾವಿರಾರು ಅಭಿಮಾನಿಗಳು ಚೆನ್ನೈನಲ್ಲಿ ಅವರ ಮನೆ ಮುಂದೆ ಜಮಾಯಿಸಿ, ನಡು ರಾತ್ರಿಯೇ ಸೆಲೆಬ್ರೇಷನ್ ಆರಂಭಿಸಿದ್ದಾರೆ. ಸೂರ್ಯ ಕೂಡ ತಮ್ಮ ಬಾಲ್ಕನಿಯಿಂದ ಅಭಿಮಾನಿಗಳಿಗೆ ಕೈ ಬೀಸುತ್ತಾ ಧನ್ಯವಾದ ಹೇಳಿದರು.
ಈ ವಿಶೇಷ ಸಂದರ್ಭದಲ್ಲಿ ಸೂರ್ಯ ಅಭಿನಯದ ಹೊಸ ಸಿನಿಮಾ ‘ಕರುಪ್ಪು’ ಟೀಸರ್ ಬಿಡುಗಡೆಯಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿ ಐದು ಭಾಷೆಗಳಲ್ಲಿ ಈ ಟೀಸರ್ ಲಾಂಚ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಗಳಿಸಿದೆ.
ಟೀಸರ್‌ನಲ್ಲಿ ಸೂರ್ಯ ಎರಡು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದು, ಆ್ಯಕ್ಷನ್ ದೃಶ್ಯಗಳು ಗಮನ ಸೆಳೆಯುತ್ತಿವೆ. ಈ ಮೂಲಕ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಇತ್ತೀಚೆಗೆ ‘ಕಂಗುವ’ ಮತ್ತು ‘ರೆಟ್ರೋ’ ಸಿನಿಮಾಗಳು ನಿರೀಕ್ಷೆ ತಲುಪದರೂ, ಸೂರ್ಯ ಅವರ ಮೆಚ್ಚುಗೆಯಲ್ಲಿ ಯಾವುದೇ ಕಡಿಮೆಯಿಲ್ಲ.
ಅಭಿಮಾನಿಗಳ ಪ್ರೀತಿಗೆ ಸ್ಪಂದನೆ ನೀಡಿದ ಸೂರ್ಯ, ತಮ್ಮ ಸಿನಿಮಾ ಜರ್ನಿ ಮುಂದೂ ಸಾಗಲಿ ಎಂಬ ಹಾರೈಕೆಯೊಂದಿಗೆ ತಮ್ಮ ಹುಟ್ಟುಹಬ್ಬದ ದಿನವನ್ನೆಲ ಹಂಚಿಕೊಂಡಿದ್ದಾರೆ. ‘ಕರುಪ್ಪು’ ಸಿನಿಮಾ ಕೂಡ ಅದೇ ರೀತಿಯ ಹೊಸ ಸೆನ್ಸೇಷನ್ ಸೃಷ್ಟಿಸಲಿದೆ ಎಂಬ ಭರವಸೆ ಅಭಿಮಾನಿಗಳಲ್ಲಿ ಮೂಡಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
