ಶಿವರಾಜ್‌ಕುಮಾರ್-ಉಪೇಂದ್ರರ ‘45’ ಸಿನಿಮಾ ಹಾಲಿವುಡ್ ತಂತ್ರಜ್ಞರಿಂದ ವಿಎಫ್‌ಎಕ್ಸ್


ಶಿವರಾಜ್‌ಕುಮಾರ್-ಉಪೇಂದ್ರರ ‘45’ ಸಿನಿಮಾ ಹಾಲಿವುಡ್ ತಂತ್ರಜ್ಞರಿಂದ ವಿಎಫ್‌ಎಕ್ಸ್ ಶಿವರಾಜ್‌ಕುಮಾರ್, ಉಪೇಂದ್ರ, ಮತ್ತು ರಾಜ್ ಬಿ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ‘45’ ಸಿನಿಮಾ ಇದೀಗ ಮತ್ತಷ್ಟು ದೊಡ್ಡ ಆಕರ್ಷಣೆಯಾಗುತ್ತಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮೊದಲ ನಿರ್ದೇಶನದ ಈ ಚಿತ್ರಕ್ಕೆ ಹಾಲಿವುಡ್‌ನ MARZ ಸಂಸ್ಥೆಯ ತಂತ್ರಜ್ಞರು ವಿಎಫ್‌ಎಕ್ಸ್ ಕೆಲಸ ಮಾಡುತ್ತಿದ್ದಾರೆ. ‘45’ ಚಿತ್ರದಲ್ಲಿ ಶಿವಣ್ಣ-ಉಪ್ಪಿ ‘ಓಂ’ ಮತ್ತು ‘ಪ್ರೀತ್ಸೆ’ ಸಿನಿಮಾಗಳ ನಂತರ, ಶಿವಣ್ಣ-ಉಪೇಂದ್ರ ಜೋಡಿ ಮತ್ತೊಮ್ಮೆ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ಕನ್ನಡ ಅಭಿಮಾನಿಗಳಿಗೆ ಹಬ್ಬದ ಕ್ಷಣವಾಗಿದೆ. ಸಿನಿಮಾದಲ್ಲಿ ಮೂವರು ಕಳ್ಳರ ಕಥೆಯನ್ನು ಆಧರಿಸಿದ್ದು, ತಾಂತ್ರಿಕವಾಗಿ ಇದನ್ನು ಭರ್ಜರಿಯಾಗಿ ಮೂಡಿಸಲು ಹಾಲಿವುಡ್ ತಂತ್ರಜ್ಞರ ನೆರವನ್ನು ಪಡೆದುಕೊಂಡಿದ್ದಾರೆ. ಹಾಲಿವುಡ್ ಸ್ಟ್ಯಾಂಡರ್ಡ್ ವಿವಿಎಫ್‌ಎಕ್ಸ್ ‘ಸ್ಪೈಡರ್ ಮ್ಯಾನ್ ನೋ ವೇ ಹೋಮ್’, ‘ಸ್ಟ್ರೇಂಜರ್ ಥಿಂಗ್ಸ್’, ‘ಮೂನ್ ಲೈಟ್’ ಸೇರಿದಂತೆ ಹಲವು ಬೃಹತ್ ಹಾಲಿವುಡ್ ಪ್ರಾಜೆಕ್ಟ್‌ಗಳಿಗೆ ವಿಎಫ್‌ಎಕ್ಸ್ ಒದಗಿಸಿದ MARZ ಸಂಸ್ಥೆ, ‘45’ ಚಿತ್ರವನ್ನು ಹೊಸಮಟ್ಟಕ್ಕೆ ಎತ್ತಲಿದೆ. ಜನವರಿಯಲ್ಲಿ ಬಿಡುಗಡೆ ನಿರೀಕ್ಷೆ ಸಿನಿಮಾ ಜನವರಿಯಲ್ಲಿ ತೆರೆಗೆ ಬರಲು ಸಜ್ಜಾಗಿದ್ದು, ಆಕ್ಷನ್-ಡ್ರಾಮಾ ಶೈಲಿಯ ತಾಂತ್ರಿಕವಾಗಿ ಅಬ್ಬರದ ಚಿತ್ರವೋಂದು ಆಗುವ ನಿರೀಕ್ಷೆಯಿದೆ. ‘45’ ಕನ್ನಡ ಸಿನಿಮಾ ತಂತ್ರಜ್ಞಾನದಲ್ಲಿ ಹೊಸ ಮೆಟ್ಟಿಲಾಗುವಂತಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
