'ಟಾಕ್ಸಿಕ್' ಚಿತ್ರದಿಂದ ರವಿ ಬಸ್ರೂರು ಔಟ್? 'ಟಾಕ್ಸಿಕ್' ಚಿತ್ರಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ?
SStv
July 7, 2025
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' ಇದೀಗ ಮತ್ತೊಂದು ಮಹತ್ವದ ಬೆಳವಣಿಗೆಯಿಂದ ಸುದ್ದಿಯಲ್ಲಿದೆ. ಈ ಚಿತ್ರಕ್ಕೆ ಮೊದಲು ಸಂಗೀತ ನಿರ್ದೇಶಕರಾಗಿ ರವಿ ಬಸ್ರೂರು ಅವರ ಹೆಸರು ಪ್ರಕಟವಾಗಿದ್ದರೂ, ಇದೀಗ ಅನಿರುದ್ಧ್ ರವಿಚಂದ್ರನ್ ಅವರು ಫೈನಲ್ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಯಶ್ ಬರ್ತ್‌ಡೇ ದಿನ ಬಿಡುಗಡೆಗೊಂಡ ಟೀಸರ್‌ಗೆ ರವಿ ಬಸ್ರೂರಿನ ಸಂಗೀತವಿದ್ದರೂ, ಇದೀಗ ಟಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ಹಿಟ್ ನೀಡಿರುವ ಅನಿರುದ್ಧ್ ಅವರನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಅವರಿಗಿದು ಮೊದಲ ಕನ್ನಡ ಸಿನಿಮಾ ಆಗಲಿದೆ.
ನಯನತಾರಾ ಮತ್ತು ಕಿಯಾರಾ ಅಡ್ವಾಣಿ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸುತ್ತಿದ್ದು, ಹಾಲಿವುಡ್ ತಂತ್ರಜ್ಞರು ಈ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಶೂಟ್ ಆಗುತ್ತಿರುವ ಈ ಗ್ರಾಂಡ್ ಸಿನಿಮಾ 2026ರ ಮಾರ್ಚ್ 19 ರಂದು ಬಿಡುಗಡೆಗೆ ಸಿದ್ಧವಾಗಿದೆ.
ಅನಿರುದ್ಧ್ ಅವರ ಬಿಜಿಎಂ ಮತ್ತು ಹಾಡುಗಳಿಗೆ ಪ್ರೇಕ್ಷಕರಿಂದ ಈಗಾಗಲೇ ಭಾರಿ ನಿರೀಕ್ಷೆಯಿದೆ. ಚಿತ್ರತಂಡದಿಂದ ಅಧಿಕೃತ ದೃಢೀಕರಣಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
