Back to Top

"ವೈಟ್ ಡ್ರೆಸ್‌ನಲ್ಲಿ ಚೈತ್ರಾ ಆಚಾರ್ ಬ್ರೈಟ್: ಚಳಿಯಲ್ಲಿ ಬೆಂಕಿ ಹಚ್ಚಿದ ಲುಕ್!"

SSTV Profile Logo SStv July 12, 2025
ವೈಟ್ ಡ್ರೆಸ್‌ನಲ್ಲಿ ಚೈತ್ರಾ ಆಚಾರ್ ಬ್ರೈಟ್
ವೈಟ್ ಡ್ರೆಸ್‌ನಲ್ಲಿ ಚೈತ್ರಾ ಆಚಾರ್ ಬ್ರೈಟ್

ಸಿನಿಮಾ, ನಟನೆ ಮಾತ್ರವಲ್ಲ ಫ್ಯಾಷನ್ ಮತ್ತು ಆತ್ಮವಿಶ್ವಾಸದ ತಾಳಮೇಳದಲ್ಲೂ ನಟಿ ಚೈತ್ರಾ ಆಚಾರ್‌ ಸದಾ ಹೆಜ್ಜೆ ಮುನ್ನಡೆಯುತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅವರ ವೈಟ್‌ ಲುಕ್‌ ಭಾರಿ ಸದ್ದು ಮಾಡಿದ್ದು, ಪಡ್ಡೆಗಳ ಹೃದಯ ತಟ್ಟುವಂತಾಗಿದೆ. ಬಿಳಿ ಬನಿಯನ್ ಮತ್ತು ಬ್ರೌನ್ ಜೀನ್ಸ್‌ ಉಡುಪಿನಲ್ಲಿ, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋಗಳು ಸಖತ್‌ ಟ್ರೆಂಡಿಂಗ್ ಆಗಿವೆ.

ಚೈತ್ರಾ ಇತ್ತೀಚೆಗೆ ಅಪ್ಲೋಡ್ ಮಾಡಿದ ಫೋಟೋಗಳಲ್ಲಿ ಅವರ ಬೋಲ್ಡ್ ಲುಕ್‌ ಮತ್ತು ನಗುವಿನ ಅಭಿವ್ಯಕ್ತಿ ಪರ್ಫೆಕ್ಟ್ ಕ್ಯಾಪ್ಚರ್ ಆಗಿದ್ದು, ಒಂದಕ್ಕಿಂತ ಒಂದು ಫೋಟೋ ಹೆಚ್ಚು ಇಂಪ್ರೆಸಿವ್‌. “ಬೆಂಕಿ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿರುವುದು ಈಗ ವೈರಲ್ ಆಗುತ್ತಿದೆ. ಚೈತ್ರಾ ಇತ್ತೀಚೆಗಷ್ಟೇ ತಮಿಳಿನ ತಾರೆಯರಾದ ಸಿದ್ಧಾರ್ಥ್, ಶರತ್ ಕುಮಾರ್ ಅವರೊಂದಿಗೆ 3BHK ಫ್ಯಾಮಿಲಿ ಥೀಮ್ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿದ್ದಾರೆ. ಅಲ್ಲದೆ, ಕನ್ನಡದಲ್ಲಿ ಅವರು 'ಮಾರ್ನಮಿ' ಎಂಬ ಸಿನಿಮಾದಲ್ಲಿ ಹಳ್ಳಿ ಹುಡುಗಿ ದೀಕ್ಷಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟೀಸರ್‌ಗೂ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಬೆಂಬಲ ನೀಡಿದ್ದಾರೆ.

ಇತ್ತೀಚೆಗಷ್ಟೆ ಚೈತ್ರಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ Ask Me Anything ಸೆಷನ್ ನಡೆಸಿದಾಗ, ವ್ಯಕ್ತಿಯೊಬ್ಬ “ನೀವು ಅವಕಾಶಕ್ಕಾಗಿ ಸೆಕ್ಸ್ ಮಾಡಿದ್ದೀರಾ?” ಎಂಬ ಪ್ರಶ್ನೆ ಕೇಳಿದ್ದ. ಈ ಪ್ರಶ್ನೆಗೆ ಚೈತ್ರಾ ಸ್ಪಷ್ಟವಾಗಿ – “ನಾನು ಅವಕಾಶಕ್ಕಾಗಿ ಸೆಕ್ಸ್ ಮಾಡಿಲ್ಲ. ನಾನು ಪ್ರತಿಭಾವಂತೆ, ಪಲ್ಲಂಗ ಏರಿ ಅವಕಾಶ ಬೇಕಾದಷ್ಟಿಲ್ಲ" ಎಂಬ ಖಡಕ್ ಉತ್ತರ ನೀಡಿದ್ರು. ಪ್ರತಿಯೊಬ್ಬರು ಟೀಕೆಗೆ ಗುರಿಯಾಗಬಹುದು. ಆದರೆ ಚೈತ್ರಾ ಅದಕ್ಕೆ ತಲೆಬಾಗದೆ ತಮ್ಮದೇ ಆದ ಶೈಲಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಫ್ಯಾನ್ಸ್ ಜೊತೆ ನೇರ ಸಂಪರ್ಕದಲ್ಲಿರುವುದು ಅವರ ಭಿನ್ನತೆ. ಟೀಕೆಗಳಿಗೆ ಉತ್ತರ ನೀಡುವುದರಲ್ಲಿ ಅವರು ಹಿಂದೇಟು ಹಾಕಿಲ್ಲ.

ಚೈತ್ರಾ ಆಚಾರ್ ಇಂದು ಕನ್ನಡ ಚಿತ್ರರಂಗದಲ್ಲಿ ನಟನೆಗೂ ಸಮಾನವಾಗಿ ಸ್ಪಷ್ಟ ಮಾತು, ಧೈರ್ಯ ಮತ್ತು ಫ್ಯಾಷನ್‌ ಗಮನ ಸೆಳೆಯುತ್ತಿರುವ ನಟಿ. ಅವರ ಮುಂಬರುವ ಚಿತ್ರಗಳು, ಅಭಿಪ್ರಾಯಗಳು ಹಾಗೂ ವ್ಯಕ್ತಿತ್ವ ಇವೆಲ್ಲವೂ ಸೇರಿ ಅವಳನ್ನು ಸ್ಯಾಂಡಲ್‌ವುಡ್‌ನಲ್ಲಿ ನೋಡಲೇಬೇಕಾದ ಪ್ರತಿಭೆಯನ್ನಾಗಿ ಮಾಡಿದೆ.