ವೀರ್ಯ ದಾನಿ ಕುರಿತು ಬಾಯ್ಬಿಟ್ಟ ನಟಿ ಭಾವನಾ ರಾಮಣ್ಣ: ‘‘ಮಕ್ಕಳ ಭವಿಷ್ಯದ ಬಗ್ಗೆ ನನಗೆ ಸ್ಪಷ್ಟತೆ ಬೇಕಿತ್ತು’’


ಚಿರಪರಿಚಿತ ನಟಿ ಭಾವನಾ ರಾಮಣ್ಣ, ತಮ್ಮ ತೀರ್ಮಾನಗಳ ಮೂಲಕ ಸಮಾಜದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಡುತ್ತಿದ್ದಾರೆ. ಮದುವೆಯಾಗದೆ, ಸಂಗಾತಿಯಿಲ್ಲದೆ, IVF (In-Vitro Fertilization) ತಂತ್ರಜ್ಞಾನದ ಮೂಲಕ ತಾಯಿಯಾಗಲು ನಿರ್ಧರಿಸಿರುವ ಅವರು ಇದೀಗ 6 ತಿಂಗಳ ಗರ್ಭಿಣಿಯಾಗಿದ್ದಾರೆ. ಇದೇ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಲಿರುವ ಭಾವನಾ, ಸದ್ಯ ತಮ್ಮ ಜೀವನದ ಮಹತ್ವದ ಹಂತದಲ್ಲಿದ್ದಾರೆ. ಇತ್ತೀಚೆಗಷ್ಟೆ ನಡೆದ ಸಂದರ್ಶನವೊಂದರಲ್ಲಿ ಅವರು ವೀರ್ಯ ದಾನಿ ಕುರಿತು ಬಹುಮುಖ್ಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. IVF ಪ್ರಕ್ರಿಯೆಯಲ್ಲಿ ದಾನಿಯ ಆಯ್ಕೆ ಹೇಗೆ ನಡೆಯುತ್ತದೆ? ದಾನಿ ಯಾರು? ನಾನೇ ಆಯ್ಕೆ ಮಾಡಿದ್ದೇನೆ ಎಂದಿರಾ? ಎಂಬ ಎಲ್ಲ ಪ್ರಶ್ನೆಗಳಿಗೆ ಅವರು ಮುಕ್ತವಾಗಿ ಉತ್ತರಿಸಿದ್ದಾರೆ.
‘‘ವೀರ್ಯ ಅಥವಾ ಅಂಡಾಣ ದಾನಿಗಳಿಗೆ ಕೆಲವು ಕಟ್ಟುನಿಟ್ಟಾದ ನಿಯಮಗಳಿವೆ. ದಾನಿಯ ದೈಹಿಕ ಆರೋಗ್ಯ, ಮಾನಸಿಕ ಸ್ಥಿತಿ, ವಿದ್ಯಾರ್ಹತೆ, ಹಾಗೂ ಕ್ರಿಮಿನಲ್ ಹಿನ್ನೆಲೆ ಎಲ್ಲವನ್ನೂ ತಪಾಸಣೆ ಮಾಡಲಾಗುತ್ತದೆ. ರಕ್ತಪರೀಕ್ಷೆ ಕೂಡ ಮಾಡಲಾಗುತ್ತದೆ,’’ ಎಂದು ಅವರು ವಿವರಿಸಿದ್ದಾರೆ. ಇದಕ್ಕೆ ಸ್ಪಷ್ಟ ಉತ್ತರ ನೀಡಿದ ಅವರು, ‘‘ನಾನು ದಾನಿಯನ್ನ ಖುದ್ದಾಗಿ ಆಯ್ಕೆ ಮಾಡಿಲ್ಲ. ವೈದ್ಯರೇ ಎಲ್ಲವನ್ನೂ ನಿರ್ವಹಿಸಿದರು. ಆದರೆ ಒಂದು ಮಾತು ಮಾತ್ರ ಕೇಳಿಸಿದ್ದೆ ದಕ್ಷಿಣ ಭಾರತದವನೇ ಇರಲಿ, ಆಹಾರ ಅಭ್ಯಾಸ ಮತ್ತು ಜೀವನಶೈಲಿ ಹೆಚ್ಚು ಹೊಂದಿಕೆಯಾಗುತ್ತದೆ ಎಂದು,’’ ಎಂದು ತಿಳಿಸಿದ್ದಾರೆ.
ಭಾವನಾ ತಮ್ಮ ಸ್ನೇಹಿತರೊಂದಿಗಿನ ಮಾತುಕತೆಗೂ ಉದಾಹರಣೆ ನೀಡಿದ್ದಾರೆ. ‘‘ನನ್ನ ಕೆಲವೊಂದು ಸ್ನೇಹಿತರು 'ನಾವೇ ದಾನಿ ಆಗ್ತೀನಿ' ಎಂದು ಹೇಳಿದ್ದರು. ಆದರೆ ಒಬ್ಬರು ನನಗೆ ಹೇಳಿದ ಮಾತು ತೀವ್ರವಾಗಿ ತಟ್ಟಿತು ‘ನಿಮ್ಮ ಮಕ್ಕಳಂತೆ ಓಡಾಡ್ತಾ ಇರುವವರನ್ನು ನಾವು ಹೇಗೆ ಅಜ್ಞಾತವಾಗಿ ನೋಡುತ್ತೇವೆ?’ ಎಂಬುದು. ಅವರು ಎಮೋಷನಲ್ ಆಗಿ ಮಾತನಾಡಿದ ರೀತಿಯಿಂದ ನನಗೂ ಗಂಭೀರವಾಗಿ ಅನಿಸಿತು,’’ ಎಂದು ಹೇಳಿದ್ದಾರೆ. ಅವರ ತೀರ್ಮಾನ ಹೀಗಿತ್ತು ಗೊತ್ತಿರುವವನು ದಾನಿ ಆಗಬಾರದು. ಇದು ಭಾವನಾತ್ಮಕ ತೊಂದರೆ ಹಾಗೂ ಮಕ್ಕಳ ಭವಿಷ್ಯದಲ್ಲಿ ಅಜ್ಞಾತ ಒತ್ತಡವನ್ನು ತರುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾವನಾ ರಾಮಣ್ಣ ಅವರ ಈ ನಿರ್ಧಾರ ಸಮಾಜದಲ್ಲಿ ಮಹತ್ವದ ಸಂದೇಶವನ್ನು ನೀಡುತ್ತಿದೆ. ತಾಯಿ ಎಂಬ ಪಾತ್ರಕ್ಕೆ ಮದುವೆ ಅಥವಾ ಸಂಗಾತಿ ಎಂಬ ಅಡ್ಡಿಯಿಲ್ಲ ಎಂದು ಅವರು ದೃಢವಾಗಿ ಸಾರಿದ್ದಾರೆ. ತಮ್ಮ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ಈ ಧೈರ್ಯಶಾಲಿ ತೀರ್ಮಾನವು ಹಲವು ಮಹಿಳೆಯರಿಗೆ ಪ್ರೇರಣೆಯಾಗಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
