Back to Top

"ವಿಜಿ ಒತ್ತಡಕ್ಕೆ ಬಿದ್ದು ಪೋಸ್ಟ್ ಹಾಕಿರಬಹುದು" – ವಿಜಯಲಕ್ಷ್ಮಿ ವಿರುದ್ಧ ರಮ್ಯಾ ಶಂಕೆ

SSTV Profile Logo SStv July 29, 2025
ವಿಜಯಲಕ್ಷ್ಮಿ ವಿರುದ್ಧ ರಮ್ಯಾ ಶಂಕೆ
ವಿಜಯಲಕ್ಷ್ಮಿ ವಿರುದ್ಧ ರಮ್ಯಾ ಶಂಕೆ

ದರ್ಶನ್ ಜಾಮೀನು ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿದ ಹೇಳಿಕೆಯನ್ನು ಹಂಚಿಕೊಂಡ ನಟಿ ರಮ್ಯಾ, ಆ ಪೋಸ್ಟ್‌ಗೆ ಅಶ್ಲೀಲ ಕಾಮೆಂಟ್ ಮಾಡಿದ ದರ್ಶನ್ ಅಭಿಮಾನಿಗಳ ವಿರುದ್ಧ ಬೆಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಸುಮಾರು 43 ಖಾತೆಗಳ ವಿರುದ್ಧ ಶಕ್ತಿ ಶಾಲಿ ಕ್ರಮಕ್ಕೆ ಮುಂದಾಗಿರುವ ಅವರು, "ಇವ್ರಿಗೂ ರೇಣುಕಾಸ್ವಾಮಿಗೂ ವ್ಯತ್ಯಾಸವೇನು?" ಎಂದು ಕಿಡಿಕಾರಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ರಮ್ಯಾ, “ನ್ಯಾಯ ಸಿಗುತ್ತೆ ಅನ್ನೋ ನಂಬಿಕೆ ಇದೆ. ಕಾನೂನು ಕೈಗೆ ತೆಗೆದುಕೊಳ್ಳೋದು ತಪ್ಪು. ಹೆಣ್ಣುಮಕ್ಕಳಿಗೆ ಸಮಾನ ಸ್ವಾತಂತ್ರ್ಯ ಇರಬೇಕು. ಇಂತಹ ಸಂದೇಶಗಳನ್ನು ಸಮಾಜಕ್ಕೆ ಕೊಡುವ ಸಲುವಾಗಿ ಈ ದೂರು ನೀಡಿದ್ದೇನೆ,” ಎಂದು ಹೇಳಿದ್ದಾರೆ.

ವಿಜಯಲಕ್ಷ್ಮಿ ಹಾಗೂ ರಕ್ಷಿತಾ ಮಾಡಿದ ಪೋಸ್ಟ್‌ಗಳು ತಮಗೆ ಸಂಬಂಧಿಸಿದ್ದೇ ಎಂಬದು ಸ್ಪಷ್ಟವಿಲ್ಲವಂತೆ. “ವಿಜಿ ಒತ್ತಡಕ್ಕೆ ಬಿದ್ದು ಪೋಸ್ಟ್ ಹಾಕಿರಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ನಟ ಪ್ರಥಮ್ ಕೂಡ ದೂರು ಕೊಡುತ್ತಾರೆ ಎಂಬ ನಂಬಿಕೆ ಹೊಂದಿದ್ದಾರೆ. ಈ ಪ್ರಕರಣ ಚಿತ್ರರಂಗ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.