ಅನುಶ್ರೀಗೆ ಆಗಸ್ಟ್ 28ರಂದು ಮದುವೆ: ವೇದಿಕೆಯಲ್ಲಿ ಭಾವಿ ಪತಿಗೆ ಪ್ರಪೋಸ್ ಮಾಡಿ ನಾಚಿದ ಸ್ಟಾರ್ ನಿರೂಪಕಿ!


ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಈ ತಿಂಗಳ ಕೊನೆಯಲ್ಲೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆಗಸ್ಟ್ 28ರಂದು ಬೆಂಗಳೂರಿನಲ್ಲಿ ಕಾರ್ಪೊರೇಟ್ ಉದ್ಯೋಗಿಯಾಗಿರುವ ಯುವಕನೊಂದಿಗೆ ಅವರು ಸಪ್ತಪದಿ ತುಳಿಯಲಿದ್ದಾರೆ. ಕುಟುಂಬದವರ ಆಯ್ಕೆಮಾಡಿದ ಈ ಸಂಬಂಧ ಇದೀಗ ಅಧಿಕೃತವಾಗಿ ಪಕ್ಕಾ ಆಗಿದ್ದು, ಮದುವೆ ಕಾರ್ಯಕ್ರಮವೂ ಗ್ರ್ಯಾಂಡ್ ಆಗಿ ನಡೆಯಲಿದೆ.
ಈ ನಡುವೆ, ಜೀ ಕನ್ನಡದ "ಮಹಾನಟಿ" ಕಾರ್ಯಕ್ರಮದಲ್ಲಿ ಅನುಶ್ರೀ ವೇದಿಕೆಯಿಂದಲೇ ತಮ್ಮ ಭಾವಿ ಪತಿಗೆ ಪ್ರಪೋಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನಿಶ್ವಿಕಾ ನಾಯ್ಡು ಕೇಳಿದ “ನಿಮ್ಮ ಪ್ರೀತಿಯನ್ನು ಹೇಗೆ ಹೇಳ್ತೀರಾ?” ಎಂಬ ಪ್ರಶ್ನೆಗೆ ಪ್ರತಿಯಾಗಿ “ನನ್ನ ಜೀವನದಲ್ಲಿ ಪೂರ್ಣಚಂದ್ರನಾಗಿ ನೀ ಬೇಗ ಬಾ… LOVE YOU” ಎಂದು ಹೇಳಿ ನಾಚಿಕೊಂಡ ಅನುಶ್ರೀ, ಅಲ್ಲಿ ಇದ್ದವರಿಗೂ ಪ್ರೀತಿಯ ಅರ್ಥವನ್ನು ತೋರಿಸಿದರು.
ಮೂಲತಃ ಮಂಗಳೂರಿನ ಸೂರತ್ಕಲ್‌ನವರು ಆದ ಅನುಶ್ರೀ, ‘ಟೆಲಿ ಆಂತ್ಯಕ್ಷರಿ’ ಮೂಲಕ ಟಿವಿ ಜಗತ್ತಿಗೆ ಪ್ರವೇಶಿಸಿದ ಅವರು, ನಂತರ ‘ಡಿಮ್ಯಾಂಡಪ್ಪೋ ಡಿಮಾಂಡು’, ‘ಬಿಗ್ ಬಾಸ್’, ‘ಸುವರ್ಣ ಫಿಲ್ಮ್ ಅವಾರ್ಡ್ಸ್’, ‘ಫಿಲ್ಮ್‌ಫೇರ್’, ‘ಎಸ್‌ಐಐಎಂಎ’ ಮುಂತಾದ ದೊಡ್ಡ ಕಾರ್ಯಕ್ರಮಗಳಲ್ಲಿ ನಿರೂಪಣಾ ಕೌಶಲ್ಯ ತೋರಿಸಿದ್ದಾರೆ. ಜೊತೆಗೆ, ‘ಬೆಂಕಿಪಟ್ನ’, ‘ಉಪ್ಪು ಹುಳಿ ಖಾರ’, ‘ಮುರಳಿ ಮೀಟ್ಸ್ ಮೀರಾ’ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.
ಪ್ರಸ್ತುತ “ಮಹಾನಟಿ” ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಂಡಿರುವ ಅನುಶ್ರೀ, ತಮ್ಮ ವಿಭಿನ್ನ ಶೈಲಿಯಿಂದ ಮಾತ್ರವಲ್ಲ, ತಮ್ಮ ವ್ಯಕ್ತಿತ್ವದಿಂದಲೂ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇವರ ಮದುವೆ ಸುದ್ದಿ ಇದೀಗ ಅಭಿಮಾನಿಗಳ ಮಧ್ಯೆ ಸಿಹಿ ಸುದ್ದಿಯಾಗಿ ಹರಡಿದಿದೆ.
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
