Back to Top

ವಿದೇಶಕ್ಕೆ ಹೊರಟ ಕಾರ್ತಿಕ್ ಮಹೇಶ್; ಹೊಸ ಸಿನಿಮಾದ ಶೂಟಿಂಗ್ ಕಾರಣ?

SSTV Profile Logo SStv July 15, 2025
ವಿದೇಶಕ್ಕೆ ಹೊರಟ ಕಾರ್ತಿಕ್ ಮಹೇಶ್
ವಿದೇಶಕ್ಕೆ ಹೊರಟ ಕಾರ್ತಿಕ್ ಮಹೇಶ್

'ಬಿಗ್ ಬಾಸ್ ಕನ್ನಡ ಸೀಸನ್ 10'ರ ವಿಜೇತ ಕಾರ್ತಿಕ್ ಮಹೇಶ್ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. 'ರಾಮರಸ' ಮತ್ತು 'ರಿಚಿ ರಿಚ್' ಸಿನಿಮಾಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಅವರು ಈಗ ಹೊಸ ಸಿನಿಮಾ ಒಂದಿಗಾಗಿ ವಿದೇಶಕ್ಕೆ ತೆರಳಲು ಸಿದ್ಧರಾಗಿದ್ದಾರೆ.

ಈ ಹೊಸ ಸಿನಿಮಾದ ಶೂಟಿಂಗ್ ಸಂಪೂರ್ಣವಾಗಿ ವಿದೇಶದಲ್ಲಿ ನಡೆಯಲಿದ್ದು, ಕಥೆಯು ವಿದೇಶದ ಹಿನ್ನೆಲೆಯನ್ನು ಹೊಂದಿದೆ. ಶೂಟಿಂಗ್ ಯಾವ ದೇಶದಲ್ಲಿ ನಡೆಯಲಿದೆ ಎಂಬ ಮಾಹಿತಿ ಅಧಿಕೃತವಾಗಿ ಬಹಿರಂಗವಾಗಬೇಕಿದೆ. ಈ ನಡುವೆ ಕಾರ್ತಿಕ್ ‘ಆಲ್ಫಾ’ ಎಂಬ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ವಿಜಯ್ ಎನ್ ನಿರ್ದೇಶಿಸುತ್ತಿರುವ ಈ ಚಿತ್ರದಿಂದ ಹೊಸ ಪ್ರತಿಭೆಗೂ ಅವಕಾಶ ಸಿಗಲಿದೆ.

ಅಲ್ಲದೇ ಕಾರ್ತಿಕ್ ಮಹೇಶ್‌ ಅವರು ವೆಬ್ ಸೀರೀಸ್‌ಗೂ ಆಸಕ್ತಿ ತೋರಿಸುತ್ತಿದ್ದು, ಕೆಲವು ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಳ್ಳುತ್ತಿರುವ ಕಾರ್ತಿಕ್‌ ಅವರು ಉತ್ತಮ ಕಥೆಗಳತ್ತ ಗಮನ ಹರಿಸಿ ಅಭಿಮಾನಿಗಳ ಮನ ಗೆಲ್ಲಲು ಸಜ್ಜಾಗಿದ್ದಾರೆ.