Back to Top

‘ಪುಷ್ಪ 2’ ಸಾಂಗ್ ರಿಲೀಸ್‌ಗೂ ಮುನ್ನ ವಾರಣಾಸಿಗೆ ಶ್ರೀಲೀಲಾ ಭೇಟಿ

SSTV Profile Logo SStv November 23, 2024
ವಾರಣಾಸಿಗೆ ಶ್ರೀಲೀಲಾ ಭೇಟಿ
ವಾರಣಾಸಿಗೆ ಶ್ರೀಲೀಲಾ ಭೇಟಿ
‘ಪುಷ್ಪ 2’ ಸಾಂಗ್ ರಿಲೀಸ್‌ಗೂ ಮುನ್ನ ವಾರಣಾಸಿಗೆ ಶ್ರೀಲೀಲಾ ಭೇಟಿ ಕನ್ನಡದ ನಟಿ ಶ್ರೀಲೀಲಾ ಅವರು ಅಲ್ಲು ಅರ್ಜುನ್‌ ಜೊತೆ ಹೆಜ್ಜೆ ಹಾಕಿರುವ ‘ಕಿಸ್ಸಿಕ್’ ಸಾಂಗ್ ನ.24ರಂದು ರಿಲೀಸ್ ಆಗಲಿದೆ. ‘ಪುಷ್ಪ 2’ ಸಾಂಗ್ ರಿಲೀಸ್‌ಗೂ ಮುನ್ನ ಅಮ್ಮನ ಜೊತೆ ಶ್ರೀಲೀಲಾ ವಾರಣಾಸಿಗೆ ಭೇಟಿ ನೀಡಿದ್ದಾರೆ.ಅಮ್ಮ ಸ್ವರ್ಣಲತಾ ಜೊತೆ ವಾರಣಾಸಿಗೆ ಶ್ರೀಲೀಲಾ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲಿ ಕೆಲ ಕಾಲ ಸಮಯ ಕಳೆದಿದ್ದಾರೆ.ಇನ್ನೂ ಶ್ರೀಲೀಲಾ ಎಂತಹ ಡ್ಯಾನ್ಸರ್ ಎಂಬುದನ್ನು ಈಗಾಗಲೇ ಪ್ರೂವ್ ಮಾಡಿದ್ದಾರೆ. ಹಾಗಾಗಿ ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ಶ್ರೀಲೀಲಾ ಐಟಂ ಸಾಂಗ್ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.ಅಂದಹಾಗೆ, ‘ಪುಷ್ಪ 2’ ಸಿನಿಮಾ ಇದೇ ಡಿ.5ಕ್ಕೆ ರಿಲೀಸ್ ಆಗಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ, ಫಹಾದ್ ಫಾಸಿಲ್, ಅನಸೂಯ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ.