Back to Top

ವೈಯಕ್ತಿಕ ದ್ವೇಷಕ್ಕೆ ಸುದೀಪ್ ಬುದ್ಧಿವಾದ ಮೋಕ್ಷಿತಾಗೆ ಪಾಠ

SSTV Profile Logo SStv December 9, 2024
ವೈಯಕ್ತಿಕ ದ್ವೇಷಕ್ಕೆ ಸುದೀಪ್ ಬುದ್ಧಿವಾದ
ವೈಯಕ್ತಿಕ ದ್ವೇಷಕ್ಕೆ ಸುದೀಪ್ ಬುದ್ಧಿವಾದ
ವೈಯಕ್ತಿಕ ದ್ವೇಷಕ್ಕೆ ಸುದೀಪ್ ಬುದ್ಧಿವಾದ ಮೋಕ್ಷಿತಾಗೆ ಪಾಠ ಬಿಗ್ ಬಾಸ್ ಕನ್ನಡ ಸೀಸನ್ 11ರ ಶನಿವಾರದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಮೋಕ್ಷಿತಾಗೆ ಬುದ್ಧಿವಾದ ಕಲಿಸಿದರು. ಸ್ಪರ್ಧೆಯ ನಿಯಮವನ್ನು ಕೇವಲ ವೈಯಕ್ತಿಕ ದ್ವೇಷಕ್ಕಾಗಿ ಮೀರಿ, ತನ್ನ ಕೈಗೆ ಬಂದ ಕ್ಯಾಪ್ಟನ್ ಸ್ಥಾನವನ್ನು ಮೋಕ್ಷಿತಾ ಕೈಚೆಲ್ಲಿದರು. ಮೊದಲು ಮೋಕ್ಷಿತಾ ಅವರಿಗೆ ಕ್ಯಾಪ್ಟನ್ ಆಗುವ ಅವಕಾಶ ಇದ್ದರೂ, ಗೌತಮಿಯಿಂದ ಸಹಾಯ ಕೇಳಲು ಅವರು ನಿರಾಕರಿಸಿದರು. ಈ ಕಾರಣದಿಂದ ಅವಕಾಶ ಗೌತಮಿಗೆ ಹೋಯ್ತು. ಈ ಕುರಿತು ಮಾತನಾಡಿದ ಸುದೀಪ್, "ನೀವು ಇಲ್ಲಿ ಗೆಲ್ಲಲು ಬಂದಿದ್ದೀರೋ ಅಥವಾ ಇತರರನ್ನು ಮೆಚ್ಚಿಸಲು? ನೀವು ನಿಮ್ಮ ಆಟವನ್ನು ಆಡಬೇಕು, ಗೆಲ್ಲುವ ಗುರಿಯ ಮೇಲೆ ಕಣ್ಣಿಟ್ಟು ಮುಂದೆ ಸಾಗಬೇಕು" ಎಂದು ಹೇಳಿದರು. ಗೌತಮಿ ಅವರ ಆಟವನ್ನು ಮೆಚ್ಚಿದ ಸುದೀಪ್, "ಅದೃಷ್ಟದಿಂದ ಅವಕಾಶ ಬಂದರೂ ನೀವು ಅದನ್ನು ಕಠಿಣಪ್ರಯತ್ನದಿಂದ ಗೆದ್ದಿದ್ದೀರಿ, ನಿಮಗೆ ಆಲ್ ದಿ ಬೆಸ್ಟ್" ಎಂದು ಆಶೀರ್ವದಿಸಿದರು.