Back to Top

“ಪತಿ ಟೀ ಕುಡಿದ್ರು ಅಂತ ನಾನು ಹಾಲು ಕುಡಿದ್ದೆ”; ವೈಷ್ಣವಿ-ಅನುಕೂಲ್ ದಂಪತಿಯ ಹನಿ-ಹನಿ ಹನಿಮೂನ್ ಮೆಮೋಂಟ್ಸ್!

SSTV Profile Logo SStv July 31, 2025
ವೈಷ್ಣವಿ-ಅನುಕೂಲ್ ದಂಪತಿಯ ಹನಿ-ಹನಿ ಹನಿಮೂನ್ ಮೆಮೋಂಟ್ಸ್!
ವೈಷ್ಣವಿ-ಅನುಕೂಲ್ ದಂಪತಿಯ ಹನಿ-ಹನಿ ಹನಿಮೂನ್ ಮೆಮೋಂಟ್ಸ್!

ಸೀರಿಯಲ್ ನಟಿ ವೈಷ್ಣವಿ ಗೌಡ, ಮದುವೆಯ ಬಳಿಕ ಪತಿ ಅನುಕೂಲ್ ಮಿಶ್ರಾ ಜೊತೆ ತಮ್ಮ ಮೊದಲ ಟ್ರಿಪ್‌ಗಾಗಿ ಕಶ್ಮೀರ, ಕಾಶಿ, ಹೃಷಿಕೇಶ ಹಾಗೂ ಮನಾಲಿಗೆ ಭೇಟಿ ನೀಡಿದ್ದಾರೆ. ತಮ್ಮ ಈ ಸುಂದರ ಯಾತ್ರೆಯ ಮೂವ್ಮೆಂಟ್ಗಳನ್ನು ವೈಷ್ಣವಿ ಇತ್ತೀಚೆಗೆ ವಿಡಿಯೋ ರೂಪದಲ್ಲಿ ಶೇರ್ ಮಾಡಿದ್ದಾರೆ.

'ಅಗ್ನಿಸಾಕ್ಷಿ' ಹಾಗೂ 'ಸೀತಾರಾಮ' ಖ್ಯಾತಿಯ ವೈಷ್ಣವಿ, ಹಿಮದಿಂದ ತುಂಬಿದ ಮನಾಲಿಯಲ್ಲಿ ಕುಣಿದಿದ್ದ ದೃಶ್ಯ, ಗಂಗಾರತಿ ಸಂದರ್ಭದಲ್ಲಿ ಧಾರ್ಮಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಮನ ಸೆಳೆದಿದೆ. ಭಂಗಿ ಜಂಪ್, ಮ್ಯಾಗಿ ತಿನ್ನುವ ಸೀನ್, ಪತಿ ಟೀ ಕುಡಿದ ಕಾರಣದಿಂದ ಮೊದಲ ಬಾರಿಗೆ ಹಾಲು ಕುಡಿದ ಘಟನೆಗಳು ಫ್ಯಾನ್ಸ್‌ಗೆ ಭಾರೀ ಕ್ಯೂಟ್ ಅನಿಸಿವೆ.

ಇದರ ನಡುವೆ ತಾಳಿ ಹಾಕಿಲ್ಲವೆಂದು ಟ್ರೋಲ್ ಮಾಡಿದವರಿಗೆ ಉತ್ತರವಾಗಿ ವೈಷ್ಣವಿ ಸ್ಪಷ್ಟನೆ ನೀಡಿದ್ದಾರೆ:
“ನನ್ನ ಅತ್ತೆಗೂ ತಾಳಿ ಹಾಕಿಲ್ಲ. ಅವರು ಹತ್ತಿರದ ಸಂಪ್ರದಾಯವನ್ನೇ ಅನುಸರಿಸುತ್ತೇವೆ. ಮೂಗು ಚುಚಿ, ಕೈಗೆ ಬಳೆ, ಕಾಲಿಗೆ ಕಾಲುಂಗುರ – ಇವೆಲ್ಲಾ ಹಾಕಿದ್ದೇವೆ. ಶಾಸ್ತ್ರಕ್ಕೆ ಗೌರವವಿದೆ” ಎಂದಿದ್ದಾರೆ.

ಅಭಿಮಾನಿಗಳು ವೈಷ್ಣವಿ ಅವರನ್ನು ಮತ್ತೆ ಸೀರಿಯಲ್‌ನಲ್ಲಿ ನೋಡಲು ಇಚ್ಛಿಸುತ್ತಿದ್ದಾರೆ. ಸದ್ಯದಲ್ಲೇ ಅವರ ಟಿವಿ ಹಾಜರಿ ಮರಳಿ ಆರಂಭವಾಗಬಹುದು ಎಂಬ ನಿರೀಕ್ಷೆ ಇದೆ.