Back to Top

ಟ್ರೋಲರ್ಸ್‌ಗೆ ಖಡಕ್ ತಿರುಗೇಟು: ವೈಷ್ಣವಿ ಗೌಡ ಅವರ ಕಾಲುಂಗುರ ಫೋಟೋ ಶೂಟ್ ವೈರಲ್

SSTV Profile Logo SStv August 5, 2025
ವೈಷ್ಣವಿ ಗೌಡ ಅವರ ಕಾಲುಂಗುರ ಫೋಟೋ ಶೂಟ್ ವೈರಲ್
ವೈಷ್ಣವಿ ಗೌಡ ಅವರ ಕಾಲುಂಗುರ ಫೋಟೋ ಶೂಟ್ ವೈರಲ್

ಟ್ರೋಲರ್ಸ್‌ಗೆ ಇಣುಕಿ ನೋಡುವ ಅವಕಾಶವೇ ಕೊಡದೆ, ನಟಿ ವೈಷ್ಣವಿ ಗೌಡ ಹೊಸ ಫೋಟೋ ಶೂಟ್ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ. ಬಿಳಿ ಬಣ್ಣದ ಗೌನ್‌ನಲ್ಲಿ ಸೌಂದರ್ಯದ ಮೆರವಣಿಗೆ ನಡೆಸಿರುವ ವೈಷ್ಣವಿ, ಈ ಬಾರಿ ಕಾಲುಂಗುರವನ್ನೇ ಹೈಲೈಟ್ ಮಾಡುವ ರೀತಿಯಲ್ಲಿ ಪೋಸ್ ಕೊಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ಪಡೆಯುತ್ತಿದೆ.

ಇತ್ತೀಚೆಗಷ್ಟೇ ಅನುಕೂಲ್ ಮಿಶ್ರಾರನ್ನು ವಿವಾಹವಾಗಿದ್ದ ವೈಷ್ಣವಿ, ಹನಿಮೂನ್‌ ನಂತರ ತಾಳಿ ಧರಿಸಿಲ್ಲ ಎಂಬ ಕಾರಣಕ್ಕೆ ಟ್ರೋಲರ್ಸ್ ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಅವರು, "ನಮ್ಮ ಸಂಪ್ರದಾಯದಲ್ಲಿ ತಾಳಿ ಹಾಕುವ ಪದ್ಧತಿ ಇಲ್ಲ. ಸಂಸ್ಕೃತಿಗೆ ಗೌರವವಿದೆ, ಆದರೆ ನಮ್ಮ ಮನೆಯಲ್ಲಿ ಇದು ರೂಢಿಯಲ್ಲ" ಎಂದು ಸ್ಪಷ್ಟನೆ ನೀಡಿದ್ದರು.

ಆದರೂ ಟ್ರೋಲಿಂಗ್ ನಿಲ್ಲದ ಹಿನ್ನೆಲೆ, ತಮ್ಮ ಕಾಲುಂಗುರವನ್ನು ಹೈಲೈಟ್ ಮಾಡುವ ಶೈಲಿಯ ಫೋಟೋ ಶೂಟ್ ಮೂಲಕ ವೈಷ್ಣವಿ ಮೌನವಾದ ಉತ್ತರ ನೀಡಿದ್ದಾರೆ. ಈ ಫೋಟೋಗೆ ನೆಟ್ಟಿಗರು "ಬಿಳಿ ಚಿಟ್ಟೆ" ಎಂದು ಕೊಂಡಾಡುತ್ತಿದ್ದಾರೆ.