ತ್ರಿವಿಕ್ರಮ್ VS ರಜತ್ ಮಧ್ಯೆ ಮಾತಿನ ಜಿದ್ದಾಜಿದ್ದಿ ಉಸ್ತುವಾರಿಗಳಿಂದ ಮತ್ತೆ ಟಾಸ್ಕ್ ರದ್ದಾಗುತ್ತಾ


ತ್ರಿವಿಕ್ರಮ್ VS ರಜತ್ ಮಧ್ಯೆ ಮಾತಿನ ಜಿದ್ದಾಜಿದ್ದಿ ಉಸ್ತುವಾರಿಗಳಿಂದ ಮತ್ತೆ ಟಾಸ್ಕ್ ರದ್ದಾಗುತ್ತಾ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11, 72ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿದಿನವೂ ಗಲಾಟೆ ಮತ್ತು ಡ್ರಾಮಾ ನಡಿತಲೇ ಇದೆ. ಈ ಬಾರಿಯೂ ಬಿಗ್‌ಬಾಸ್ ಕೊಟ್ಟ ಟಾಸ್ಕ್‌ಗಳು ಅರ್ಥಪೂರ್ಣವಾಗಿ ಪೂರ್ಣಗೊಳ್ಳದೇ ಅರ್ಧದಲ್ಲೇ ನಿಲ್ಲುತ್ತಿವೆ. ಟಾಸ್ಕ್ ಉಸ್ತುವಾರಿಗಳ ಮಧ್ಯೆ ಜಗಳ, ಭಿನ್ನಭಿಪ್ರಾಯಗಳು ಇದಕ್ಕೆ ಕಾರಣವಾಗಿದೆ.
ಇತ್ತೀಚಿಗೆ ಬಿಡುಗಡೆಯಾದ ಪ್ರೋಮೋದಲ್ಲಿ, ಡ್ರಮ್ ಉರುಳಿಸಿ ಚೀಲಗಳನ್ನು ಸಂಗ್ರಹಿಸುವ ಹೊಸ ಟಾಸ್ಕ್ ನೀಡಲಾಗಿದೆ. ರಜತ್ ಮತ್ತು ತ್ರಿವಿಕ್ರಮ್ ತಮ್ಮ ತಮ್ಮ ತಂಡಗಳಿಗೆ ಉಸ್ತುವಾರಿಗಳಾಗಿದ್ದು, ಟಾಸ್ಕ್ ಆಡುತ್ತಲೇ ಗಲಾಟೆ ಆರಂಭವಾಗಿದೆ. ತ್ರಿವಿಕ್ರಮ್ ತಂಡದ ಸದಸ್ಯರು ನಿಯಮ ಉಲ್ಲಂಘಿಸಿದ್ದಾರೆ ಎಂದು ರಜತ್ ಆರೋಪ ಮಾಡುತ್ತಿದ್ದಂತೆಯೇ, ಮಾತಿನ ಚಕಮಕಿ ತೀವ್ರಗೊಂಡಿದೆ.
ಈ ಗಲಾಟೆಯಿಂದಾಗಿ ಈ ಬಾರಿಯ ಟಾಸ್ಕ್ ಕೂಡ ರದ್ದಾಗುತ್ತಾ ಎಂಬುದು ವೀಕ್ಷಕರ ಕಾಳಜಿಯ ವಿಷಯವಾಗಿದೆ. ಬಿಗ್‌ಬಾಸ್ ಈ ಗಲಾಟೆಯನ್ನು ಹೇಗೆ ನಿಭಾಯಿಸುತ್ತಾರೆ ಎಂದು ಕಾದುನೋಡಬೇಕಾಗಿದೆ
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
