ಟಾಲಿವುಡ್ ಅಂಗಳದಲ್ಲಿ ಉಪೇಂದ್ರನ ‘UI’ ಅಬ್ಬರ ವಿತರಣೆ ಹಕ್ಕು ಖರೀದಿಸಿದ ಅಲ್ಲು ಅರವಿಂದ್


ಟಾಲಿವುಡ್ ಅಂಗಳದಲ್ಲಿ ಉಪೇಂದ್ರನ ‘UI’ ಅಬ್ಬರ ವಿತರಣೆ ಹಕ್ಕು ಖರೀದಿಸಿದ ಅಲ್ಲು ಅರವಿಂದ್ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ ‘UI’ ಸಿನಿಮಾ ಟಾಲಿವುಡ್‌ನಲ್ಲೂ ಭರ್ಜರಿ ಸದ್ದು ಮಾಡಲಿದೆ. ಇತ್ತೀಚೆಗೆ ಅಲ್ಲು ಅರವಿಂದ್ ಅವರ ಗೀತಾ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಈ ಚಿತ್ರದ ಆಂಧ್ರ ಮತ್ತು ತೆಲಂಗಾಣದ ವಿತರಣೆ ಹಕ್ಕುಗಳನ್ನು ಖರೀದಿಸಿದ್ದು, ಈ ಸುದ್ದಿ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.
ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ‘UI’, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಡಿಸೆಂಬರ್ 20ರಂದು ಬಿಡುಗಡೆಗೊಳ್ಳಲಿದೆ. ಲಹರಿ ಫಿಲ್ಮ್ಸ್ ಈ ವಿಷಯವನ್ನು ಅಧಿಕೃತವಾಗಿ ಹಂಚಿಕೊಂಡಿದ್ದು, ಉಪೇಂದ್ರನ ಹೊಸ ರೀತಿಯ ಕಥನ ಶೈಲಿಯು ಪ್ರೇಕ್ಷಕರಿಗೆ ವಿಶಿಷ್ಟ ಅನುಭವ ನೀಡಲಿದೆ ಎಂದು ನಿರೀಕ್ಷೆ ಇದೆ.
‘UI’ ಚಿತ್ರದಲ್ಲಿ ಸನ್ನಿ ಲಿಯೋನ್, ರೀಷ್ಮಾ ನಾಣಯ್ಯ, ನಿಧಿ ಸುಬ್ಬಯ್ಯ, ಮುರಳಿ ಶರ್ಮಾ ಸೇರಿದಂತೆ ಅನೇಕ ತಾರೆಯರು ಅಭಿನಯಿಸುತ್ತಿದ್ದಾರೆ. ಸುಮಾರು 100 ಕೋಟಿ ಬಜೆಟ್‌ನಲ್ಲಿ ನಿರ್ಮಿತವಾದ ಈ ಚಿತ್ರ, ಉಪ್ಪಿಯ ಪ್ಯಾನ್ ಇಂಡಿಯಾ ಕ್ರೇಜ್‌ನ್ನು ಇನ್ನೂ ಹೆಚ್ಚಿಸಿದೆ. ಟೀಸರ್ ಮತ್ತು ಟ್ರೋಲ್ ಹಾಡು ಈಗಾಗಲೇ ಹಿಟ್ ಆಗಿದ್ದು, ಚಿತ್ರಕ್ಕಾಗಿ ಅಭಿಮಾನಿಗಳು ಉತ್ಸುಕತೆಯಿಂದ ಕಾಯುತ್ತಿದ್ದಾರೆ.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
