8 ವರ್ಷಗಳ ನಂತರ ಕಂಬ್ಯಾಕ್ ಮಾಡಿದ ನಟಿ ಅಮೂಲ್ಯ – ಈ ಬಾರಿ ನಟಿಯಾಗಿ ಅಲ್ಲ, ಜಡ್ಜ್ ಆಗಿ!


ಪ್ರಸಿದ್ಧ ಕನ್ನಡ ನಟಿ ಅಮೂಲ್ಯ, 8 ವರ್ಷಗಳ ನಂತರ ಬಣ್ಣದ ಲೋಕಕ್ಕೆ ಪುನಾರಾಗಮಿಸಿದ್ದಾರೆ. ಆದರೆ, ಈ ಬಾರಿ ಅವರು ನಟಿಯಾಗಿ ಅಲ್ಲದೆ, ಜಡ್ಜ್ ಆಗಿ ತಮ್ಮ ಪ್ರವೇಶ ನೀಡುತ್ತಿದ್ದಾರೆ. ಜೀ ಕನ್ನಡ ವಾಹಿನಿಯ ಹೊಸ ರಿಯಾಲಿಟಿ ಶೋ ‘ನಾನು ನಮ್ಮವರು’ ಯಲ್ಲಿ ಅವರು ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಶೋನಲ್ಲಿ ನಟ ಶರಣ್ ಮತ್ತು ಹಿರಿಯ ನಟಿ ತಾರಾ ಕೂಡ ಅಮೂಲ್ಯಗೆ ಜೊತೆಯಾಗಿ ಭಾಗವಹಿಸುತ್ತಿದ್ದಾರೆ. 2007ರ ‘ಚೆಲುವಿನ ಚಿತ್ತಾರ’ ಸಿನಿಮಾ ಮೂಲಕ ಖ್ಯಾತಿ ಪಡೆದ ಅಮೂಲ್ಯ, 2017ರಲ್ಲಿ ‘ಮುಗುಳು ನಗೆ’ ಚಿತ್ರದ ನಂತರ ಚಿತ್ರರಂಗದಿಂದ ದೂರ ಇದ್ದರು. ಅವರು ನಟ ಜಗದೀಶ್ ಅವರನ್ನು ಮದುವೆಯಾಗಿದ್ದರಿಂದ ಕುಟುಂಬ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದರು.
ಇದೀಗ, ಅವರು ನಟಿಯಾಗಿ ಅಲ್ಲದೇ, ತಮ್ಮ ಅನುಭವವನ್ನು ಸ್ಪರ್ಧಿಗಳೊಂದಿಗೆ ಹಂಚಿಕೊಳ್ಳುವ ಜಡ್ಜ್ ಆಗಿ ಬಣ್ಣದ ಲೋಕಕ್ಕೆ ಮರಳಿರುವುದು ಅಭಿಮಾನಿಗಳಿಗೆ ಸಂತೋಷದ ಸಂಗತಿ. ‘ನಾನು ನಮ್ಮವರು’ ಶೋ ಹೇಗೆ ಮೂಡಿ ಬರುತ್ತದೆ ಎಂಬುದು ನಿಖರವಾಗಿ ಗೊತ್ತಾಗಬೇಕಿದೆ, ಆದರೆ ಅಮೂಲ್ಯ ಅವರ ಕಂಬ್ಯಾಕ್ ಮಾತ್ರ ಈಗಾಗಲೇ ಚರ್ಚೆಗೆ ಗ್ರಾಸವಾಗಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
