Back to Top

ಥಾಯ್ಲೆಂಡ್‌ನಲ್ಲಿ ಕೂಲಿಂಗ್ ಮೋಡ್‌ದಲ್ಲಿ ದರ್ಶನ್ – ‘ಡೆವಿಲ್’ ಹಾಡು ಶೂಟಿಂಗ್ ಬಳಿಕ ವಿಶ್ರಾಂತಿ!

SSTV Profile Logo SStv July 21, 2025
ಥಾಯ್ಲೆಂಡ್‌ನಿಂದ ಆನಂದದ ಕ್ಷಣಗಳ ಫೋಟೋ ವೈರಲ್!
ಥಾಯ್ಲೆಂಡ್‌ನಿಂದ ಆನಂದದ ಕ್ಷಣಗಳ ಫೋಟೋ ವೈರಲ್!

ನಟ ದರ್ಶನ್ ಪ್ರಸ್ತುತ ಥಾಯ್ಲೆಂಡ್‌ನಲ್ಲಿ ವಿಶ್ರಾಂತಿಯಲ್ಲಿದ್ದಾರೆ. ‘ಡೆವಿಲ್’ ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ಫುಕೆಟ್ ಹಾಗೂ ಬ್ಯಾಂಕಾಕ್‌ನಲ್ಲಿ ಕಳೆದ 6 ದಿನಗಳಿಂದ ಇದ್ದ ದರ್ಶನ್, ಈಗ ಚಿತ್ರೀಕರಣ ಮುಗಿಸಿ ಕೆಲವು ದಿನ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಈ ಪ್ರವಾಸದಲ್ಲಿ ದರ್ಶನ್ ಪತ್ನಿ ಮತ್ತು ಪುತ್ರನನ್ನು ಕೂಡ ಕರೆದುಕೊಂಡು ಹೋಗಿದ್ದು, ಸ್ನೇಹಿತರೊಂದಿಗೆ ತಂಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ, ಇದೇ ಮಂಗಳವಾರ (ಜು. 23) ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ರದ್ದುಪಡಿಸಲು ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯಿದೆ. ಈ ಹಿನ್ನೆಲೆ ಅಭಿಮಾನಿಗಳಲ್ಲಿ ಆತಂಕ ಉಂಟಾಗಿದೆ.

ವಿದೇಶ ಪ್ರವಾಸದ ಬಳಿಕ ಮತ್ತೆ ಹೊರಡಬೇಕಾದರೆ ಕೋರ್ಟ್ ಅನುಮತಿ ಅಗತ್ಯವಿರುವುದರಿಂದ, ದರ್ಶನ್ ಮುಂದಿನ ನಿರ್ಧಾರಕ್ಕೆ ಕಾಯಲೇಬೇಕಾಗಿದೆ. ಈ ನಡುವೆ 'ಡೆವಿಲ್' ಚಿತ್ರೀಕರಣ ಯಶಸ್ವಿಯಾಗಿ ಮುಗಿದಿರುವುದು ಅಭಿಮಾನಿಗಳಿಗೆ ಸಂತೋಷದ ವಿಚಾರವಾಗಿದೆ.