Back to Top

ಥಾಯ್ಲೆಂಡ್‌ನಲ್ಲಿ ದರ್ಶನ್ ಮೋಜು-ಮಸ್ತಿ – ಜಾಮೀನು ವಿಚಾರಣೆಗೆ ಮುನ್ನ ನೋ ಟೆನ್ಷನ್!

SSTV Profile Logo SStv July 18, 2025
ಥಾಯ್ಲೆಂಡ್‌ನಲ್ಲಿ ದರ್ಶನ್ ಮೋಜು-ಮಸ್ತಿ
ಥಾಯ್ಲೆಂಡ್‌ನಲ್ಲಿ ದರ್ಶನ್ ಮೋಜು-ಮಸ್ತಿ

ನಟ ದರ್ಶನ್ ಗೆ ಸಂಬಂಧಿಸಿದಂತೆ ಮಹತ್ವದ ನ್ಯಾಯಾಂಗ ವಿಚಾರಣೆ ಜುಲೈ 22 ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಬೇಕಿದೆ. ಆದರೆ, ಈ ಎಲ್ಲ ಹೊರೆಗಳನ್ನು ಬದಿಗೆ ತಳ್ಳಿ, ದರ್ಶನ್ ಇದೀಗ ಥಾಯ್ಲೆಂಡ್‌ನಲ್ಲಿ ಭರ್ಜರಿ ಮೋಜು-ಮಸ್ತಿಯಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

'ಡೆವಿಲ್' ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ದರ್ಶನ್ ಮತ್ತು ಚಿತ್ರತಂಡ ಥಾಯ್ಲೆಂಡ್‌ಗೆ ತೆರಳಿದ್ದು, ಚಿತ್ರೀಕರಣದ ಜೊತೆಗೆ ಪಾರ್ಟಿ ಹಾಗೂ ವಾಟರ್ ಸ್ಪೋರ್ಟ್ಸ್ ಆ್ಯಕ್ಟಿವಿಟೀಸ್‌ನಲ್ಲಿ ಅವರು ಪಾಲ್ಗೊಂಡಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

ಹೈಕೋರ್ಟ್ ನಿಂದ ಜಾಮೀನು ಪಡೆದಿರುವ ದರ್ಶನ್ ವಿರುದ್ಧ ಜಾಮೀನು ರದ್ದು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಈ ನಡುವೆ ಸರ್ಜರಿ ಸುದ್ಧಿಗೂ ವಿರುದ್ಧವಾಗುವಂತೆ, ದರ್ಶನ್ ಎಂಜಾಯ್ ಮಾಡುತ್ತಿರುವ ನೋಟಗಳು ಪ್ರಶ್ನೆಗಳನ್ನು ಎಬ್ಬಿಸುತ್ತಿವೆ.

ದರ್ಶನ್ ಯಾವುದೇ ಟೆನ್ಷನ್ ಇಲ್ಲದೆ, ಖುಷಿಯಾಗಿರುವ ಈ ದೃಶ್ಯಗಳು ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಭಿನ್ನ ಪ್ರತಿಕ್ರಿಯೆಗಳಿಗೆ ಕಾರಣವಾಗಿವೆ.