Back to Top

‘ತಾಯವ್ವ’ ಶೀರ್ಷಿಕೆ ಅನಾವರಣ ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಮೂಡಿಸುವ ಕಂಟೆಂಟ್ ಸಿನಿಮಾಗೆ ಉದಯ

SSTV Profile Logo SStv December 5, 2024
‘ತಾಯವ್ವ’ ಶೀರ್ಷಿಕೆ ಅನಾವರಣ
‘ತಾಯವ್ವ’ ಶೀರ್ಷಿಕೆ ಅನಾವರಣ
‘ತಾಯವ್ವ’ ಶೀರ್ಷಿಕೆ ಅನಾವರಣ ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಮೂಡಿಸುವ ಕಂಟೆಂಟ್ ಸಿನಿಮಾಗೆ ಉದಯ ‘ತಾಯವ್ವ’ ಎಂಬ ಹೊಸ ಕನ್ನಡ ಸಿನಿಮಾ ಶೀರ್ಷಿಕೆ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಉದ್ಘಾಟನೆಯಾಯಿತು. ಈ ವಿಶೇಷ ಕಾರ್ಯಕ್ರಮಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಹಿರಿಯ ನಟಿ ಉಮಾಶ್ರೀ ಹಾಜರಾಗಿ, ಟೈಟಲ್ ಲಾಂಚ್‌ ಮಾಡಿದ್ದಾರೆ. ಚಿತ್ರವು ಸೂಲಗಿತ್ತಿ ಸುತ್ತ ಕತೆ ಹೆಣೆಯಲಾಗಿದ್ದು, ಭ್ರೂಣ ಹತ್ಯೆ ಮತ್ತು ಮಹಿಳಾ ಹಕ್ಕುಗಳು ಕುರಿತು ಜಾಗೃತಿ ಮೂಡಿಸುವುದು ಇದರ ಉದ್ದೇಶ. ಸಾತ್ವಿಕ್ ಪವನ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿ, ಛಾಯಾಗ್ರಹಣದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಎಸ್. ಪದ್ಮಾವತಿ ಚಂದ್ರಶೇಖರ್ ಅವರ ನಿರ್ಮಾಣದ ಈ ಚಿತ್ರವು, ಮಹಿಳೆಯರ ಹಕ್ಕುಗಳ ಪ್ರಾಮುಖ್ಯತೆಯನ್ನು ಸಾರಲು ತಯಾರಾಗಿದೆ. ಹಿರಿಯ ನಟಿ ಉಮಾಶ್ರೀ, "ಇಂತಹ ಸಿನೆಮಾಗಳು ಸಮಾಜಕ್ಕೆ ಅರಿವು ಮೂಡಿಸಲು ಬಹಳ ಮುಖ್ಯ" ಎಂದು ಅಭಿಪ್ರಾಯಪಟ್ಟರು. ಅನಂತ್ ಆರ್ಯನ್ ಅವರ ಸಂಗೀತ ಮತ್ತು ಪಿ. ಶೇಷಗಿರಿ ಬರೆದ ಕಥೆ, ಚಿತ್ರಕಥೆ ಚಿತ್ರಕ್ಕೆ ವಿಶೇಷ ಆಕರ್ಷಣೆ. ಪ್ರೇಕ್ಷಕರು ಕಾದಿರುವ ‘ತಾಯವ್ವ’ ಸದ್ಯ ಸೆನ್ಸಾರ್‌ಗಾಗಿ ಸಜ್ಜಾಗಿದೆ.