ಕೊಲ್ಲೂರು ದೇಗುಲಕ್ಕೆ ಕಾಲಿವುಡ್ ದಂಪತಿ ಸೂರ್ಯ-ಜ್ಯೋತಿಕಾ ಭೇಟಿ ಕಾಲಿವುಡ್ನ ಜನಪ್ರಿಯ ದಂಪತಿ ಸೂರ್ಯ ಮತ್ತು ಜ್ಯೋತಿಕಾ ಕೊಲ್ಲೂರು ಮೂಕಾಂಬಿಕ ದೇಗುಲಕ್ಕೆ ಭೇಟಿ ನೀಡಿ ಚಂಡಿಕಾಯಾಗದಲ್ಲಿ ಭಾಗವಹಿಸಿದ್ದಾರೆ. ಈ ಘಟನೆ ಭಕ್ತರಲ್ಲಿ ಮತ್ತು ಅಭಿಮಾನಿಗಳಲ್ಲಿ ವಿಶೇಷ ಉತ್ಸಾಹವನ್ನು ಉಂಟುಮಾಡಿದ್ದು, ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ದೇಗುಲ ನಿತ್ಯ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಸೂರ್ಯ-ಜ್ಯೋತಿಕರನ್ನು ನೋಡಲು ಭಕ್ತರು ಹಾಗೂ ಅಭಿಮಾನಿಗಳು ಮುಗಿ ಬಿದ್ದಿದ್ದು, ದಂಪತಿಗೆ ಕರ್ನಾಟಕದಲ್ಲೂ ದೊಡ್ಡ ಅಭಿಮಾನಿ ಬಳಗವಿದೆ.
ಇದೀಗ ‘ಕಂಗುವ’ ಸಿನಿಮಾದ ಹೀನಾಯ ಸೋಲು ಸೂರ್ಯಗೆ ತೀವ್ರ ಬೇಸರ ತಂದರೂ, ದೇವೀ ದರ್ಶನ ಅವರ ಮನಸ್ಸಿಗೆ ಸಮಾಧಾನವನ್ನು ನೀಡುತ್ತಿದೆಯೇನೋ ಎಂಬ ಮಾತುಗಳು ಕೇಳಿಬರುತ್ತಿವೆ.