Back to Top

ಅಶ್ಲೀಲ ಮೆಸೇಜ್‌ ಕೇಸ್ ನಡುವೆ ರಮ್ಯಾ ಹೊಸ ಫೋಟೋ ಶೂಟ್: ಅಭಿಮಾನಿಗಳ ಮೆಚ್ಚುಗೆ

SSTV Profile Logo SStv August 6, 2025
ಸ್ಟೈಲಿಶ್ ಲುಕ್‌ನಲ್ಲಿ ರಮ್ಯಾ ಶೈನ್!
ಸ್ಟೈಲಿಶ್ ಲುಕ್‌ನಲ್ಲಿ ರಮ್ಯಾ ಶೈನ್!

ಮಾಜಿ ಸಂಸದೆ, ನಟಿ ರಮ್ಯಾ ಇತ್ತೀಚೆಗೆ ತಮ್ಮ ಹೊಸ ಸ್ಟೈಲಿಷ್ ಲುಕ್‌ನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬ್ಲಾಕ್ ಜರ್ಕಿನ್ ಓವರ್‌ಕೋಟ್ ಶೈಲಿಯ ಉಡುಪಿನಲ್ಲಿ, ಮ್ಯಾಚಿಂಗ್ ಹೀಲ್ಸ್‌ ಶೂ ತೊಟ್ಟು ಗ್ಲಾಮರಸ್ ಪೋಸ್‌ ನೀಡಿರುವ ರಮ್ಯಾ, ತಮ್ಮ ಅಭಿಮಾನಿಗಳ ಮನ ಕಸಿದುಕೊಂಡಿದ್ದಾರೆ.

ಇನ್ನೊಂದೆಡೆ, 43 ಅಶ್ಲೀಲ ಅಕೌಂಟ್‌ಗಳ ವಿರುದ್ಧ ದೂರು ನೀಡಿದ್ದ ರಮ್ಯಾ ಈ ಪ್ರಕರಣದಲ್ಲಿ ಸೈಬರ್ ಪೊಲೀಸರು ನಾಲ್ವರನ್ನು ಈಗಾಗಲೇ ಬಂಧಿಸಿದ್ದಾರೆ. ಇಂತಹ ಗಂಭೀರ ಘಟನೆಗಳ ನಡುವೆಯೂ, ನಟಿ ರಮ್ಯಾ ತಮ್ಮ ಧೈರ್ಯವಂತ ವ್ಯಕ್ತಿತ್ವದೊಂದಿಗೆ ಮೆಚ್ಚುಗೆ ಪಡೆದಿದ್ದಾರೆ.

ಪ್ರತಿಯೊಬ್ಬ ಫೋಟೋದಲ್ಲಿಯೂ ಮನಸ್ಸು ಗೆಲ್ಲುವ ಶೈಲಿಯಲ್ಲಿ ಕಾಣಿಸಿಕೊಂಡಿರುವ ರಮ್ಯಾ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿಯೇ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.