Back to Top

ಸ್ಟೈಲಿಷ್ ಲುಕ್‌ನಲ್ಲಿ ಮೋನಿಷಾ ವಿಜಯಕುಮಾರ್! ‘ಸಿಟಿ ಲೈಟ್ಸ್’ ಗರ್ಜನೆಗೆ ರೆಡೀ ಆಗ್ತಿದ್ದಾರೆ

SSTV Profile Logo SStv August 4, 2025
ಸ್ಟೈಲಿಷ್ ಲುಕ್‌ನಲ್ಲಿ ಮೋನಿಷಾ ವಿಜಯಕುಮಾರ್!
ಸ್ಟೈಲಿಷ್ ಲುಕ್‌ನಲ್ಲಿ ಮೋನಿಷಾ ವಿಜಯಕುಮಾರ್!

ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಅವರ ಚಿಕ್ಕಮಗಳು ಮೋನಿಷಾ ವಿಜಯಕುಮಾರ್ ಈಗಲೇ ಸಿನಿಮಾರಂಗದಲ್ಲಿ ಸುದ್ದಿಯಾಗಿದ್ದಾರೆ. ‘ಸಿಟಿ ಲೈಟ್ಸ್’ ಎಂಬ ಸಿನಿಮಾದ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಮೋನಿಷಾ, ಇದೇ ಚಿತ್ರದಲ್ಲಿ ತಮ್ಮ ತಂದೆ ದುನಿಯಾ ವಿಜಯ್ ನಿರ್ದೇಶನದಡಿ ನಟಿಸುತ್ತಿದ್ದಾರೆ. ಮೇಕ್‌ಅಪ್ ಇಲ್ಲದೆ, ಗಂಭೀರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು, ರಿಯಲ್ ಲೈಫ್ನಲ್ಲಿ ಸ್ಟೈಲಿಶ್ ಲುಕ್‌ನಿಂದ ಗಮನ ಸೆಳೆಯುತ್ತಿದ್ದಾರೆ.

ಇತ್ತೀಚೆಗೆ ಅವರು ಮಾಡಿಸಿರುವ ಫೋಟೋ ಶೂಟ್‌ನ ಚಿತ್ರಗಳು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆಗೂ ಪಾತ್ರವಾಗಿವೆ. ಫ್ಯಾಷನ್‌ಬಲ್ ಡ್ರೆಸ್, ಮಾಡ್ರನ್ ಲುಕ್ ಮೂಲಕ ಮೋನಿಷಾ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.

ವಿದೇಶದಲ್ಲಿ ಅಭಿನಯ ತರಬೇತಿ ಪಡೆದುಕೊಂಡಿರುವ ಮೋನಿಷಾ, ಮೊದಲ ಚಿತ್ರದಲ್ಲಿಯೇ ವಿನಯ್ ರಾಜ್‌ಕುಮಾರ್ ಜತೆಯಾಗಿ ವಿಭಿನ್ನ ಪಾತ್ರ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಮತ್ತು ಶೂಟಿಂಗ್‌ ದೃಶ್ಯಗಳು ಜನರಲ್ಲಿ ಕುತೂಹಲ ಮೂಡಿಸಿವೆ.

ಸಲಗ, ಭೀಮದಂತಹ ಹಿಟ್ ಚಿತ್ರಗಳನ್ನು ನೀಡಿರುವ ದುನಿಯಾ ವಿಜಯ್ ಈ ಹೊಸ ಪ್ರಯೋಗಕ್ಕೂ ಯಶಸ್ಸು ತರುವ ನಿರೀಕ್ಷೆ ಇದೆ. ‘ಸಿಟಿ ಲೈಟ್ಸ್’ ಸಿನಿಮಾದ ಮೂಲಕ ಮೋನಿಷಾ ವಿಜಯಕುಮಾರ್ ಕನ್ನಡ ಚಿತ್ರರಂಗದಲ್ಲಿ ಭವಿಷ್ಯ ಭರಿತ ಹೆಜ್ಜೆ ಇಡುತ್ತಿದ್ದಾರೆ.