"ಈ ಸುದೀಪ್ ನಮ್ಮ ಅಫೀಸ್ ಮುಂದೆ ಚಾಪೆ ಹಾಕೊಂಡು ಮಲ್ಕೊಂಡಿದ್ರು"; ಸ್ಟಾರ್ ನಟರ ವಿರುದ್ಧ ಕನಕಪುರ ಶ್ರೀನಿವಾಸ್ ಆಕ್ರೋಶ


ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ಇತ್ತೀಚೆಗೆ ಸ್ಟಾರ್ ನಟರು ಕಿಚ್ಚ ಸುದೀಪ್, ಶಿವರಾಜ್‌ಕುಮಾರ್, ಶ್ರೀಮುರಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. "ಸಿನಿಮಾ ಮಾಡಲು ಅಡ್ವಾನ್ಸ್ ಹಣ ಕೊಟ್ಟಿದ್ದರೂ, ಈಗ ಅವರು ಕಾಲ್‌ಶೀಟ್ ನೀಡ್ತಿಲ್ಲ, ಫೋನ್‌ಕರೆಗಳುಕ್ಕೂ ಉತ್ತರ ಕೊಡ್ತಿಲ್ಲ" ಎಂಬ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಸುದೀಪ್ ಬಗ್ಗೆ ಮಾತನಾಡಿದ ಅವರು, “ಈ ಸುದೀಪ್ ನಮ್ಮ ಆಫೀಸ್ ಮುಂದೆ ಚಾಪೆ ಹಾಕೊಂಡು ಮಲ್ಕೊಂಡಿದ್ರು. ನಾಳೆ ನಾನು ಫೋಟೋಗಳು ತೋರಿಸ್ತೀನಿ” ಎಂದು ಗುಟು ಗಟ್ಟಿಯಾಗಿ ಹೇಳಿದ್ದಾರೆ. ಅವರು ಹಿಂದೆ ನಿರ್ಮಿಸಿದ್ದ ಧಮ್ ಸಿನಿಮಾ ಕಾಲದ ಸಂದರ್ಭವನ್ನೂ ಸ್ಮರಿಸಿದರು.
“ಅವರಿಗೆ ಕೊಂಬು ಬಂದಿಲ್ಲ, ಅದನ್ನ ನಿರ್ಮಾಪಕರೇ ಹಾಕಿದ್ದಾರೆ. ಹಣ ಕೊಟ್ಟದ್ದು ನಾವು. ಈಗ ಅವರು ಬೆಳೆದಿದ್ದಾರೆ, ನಾವು ಸೋತಿದ್ದೇವೆ ಎಂಬುದನ್ನ ಮರೆತರೆ ನಡೆಯಲ್ಲ” ಎಂದೂ ಹೇಳಿದರು.
ಹಿರಿಯ ನಿರ್ದೇಶಕರ ಸ್ಥಿತಿಗತಿಯ ಕುರಿತು ಮಾತನಾಡುತ್ತ, “ಎಂ.ಎಸ್. ರಮೇಶ್, ಶ್ರೀರಾಮ್ ಅವರಂಥವರು ಇಂದು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಸ್ಟಾರ್ ನಟರು ಅವರಿಗೆ ಡೇಟ್ ಕೊಡುತ್ತಿಲ್ಲ” ಎಂದು ತೀವ್ರ ವಾಗ್ದಾಳಿ ನಡೆಸಿದರು. ನಡುವೆ, ಕನಕಪುರ ಶ್ರೀನಿವಾಸ್ ರವಿಚಂದ್ರನ್ ಮತ್ತು ಉಪೇಂದ್ರ ತ್ರಿಶುಲಂನ್ನು ₹30 ಕೋಟಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದು, ಉಪೇಂದ್ರ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಲು ಉದ್ದೇಶಿಸಿದ್ದಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
