Back to Top

ಎರಡನೇ ಮದುವೆ ಕುರಿತು ವಿಜಯ್ ರಾಘವೇಂದ್ರ ಸ್ಪಷ್ಟನೆ: ‘ಸ್ಪಂದನಾ ನಂತರ ನನ್ನ ಮನಸ್ಸಲ್ಲಿ ಯಾರಿಗೂ ಜಾಗ ಇಲ್ಲ’

SSTV Profile Logo SStv July 17, 2025
‘ಸ್ಪಂದನಾ ನಂತರ ನನ್ನ ಮನಸ್ಸಲ್ಲಿ ಯಾರಿಗೂ ಜಾಗ ಇಲ್ಲ’
‘ಸ್ಪಂದನಾ ನಂತರ ನನ್ನ ಮನಸ್ಸಲ್ಲಿ ಯಾರಿಗೂ ಜಾಗ ಇಲ್ಲ’

ನಟ ವಿಜಯ್ ರಾಘವೇಂದ್ರ, ಪತ್ನಿ ಸ್ಪಂದನಾ ನಿಧನದ ನಂತರ ತಮ್ಮ ಎರಡನೇ ಮದುವೆ ಕುರಿತ ಸುಳ್ಳು ಸುದ್ದಿಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಮೇಘನಾ ರಾಜ್ ಅವರೊಂದಿಗೆ ತಮ್ಮ ಸ್ನೇಹವನ್ನು ತಿರುಚಿ ಹಬ್ಬಿಸಿದ ಆಧಾರರಹಿತ ಗಾಸಿಪ್‌ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

‘ಫಸ್ಟ್ ಡೇ ಫಸ್ಟ್ ಶೋ’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, “ನನ್ನ ಬದುಕಿನಲ್ಲಿ ಇನ್ನೊಬ್ಬರನ್ನು ಬರಮಾಡಿಕೊಳ್ಳೋದು ಸಾಧ್ಯವಿಲ್ಲ. ಸ್ಪಂದನಾ ಮಾತ್ರವಲ್ಲ, ಯಾರಿಗೂ ನನ್ನ ಮನಸ್ಸಿನಲ್ಲಿ ಜಾಗ ಇಲ್ಲ” ಎಂದು ಸ್ಪಷ್ಟವಾಗಿ ಹೇಳಿರುವ ವಿಜಯ್, ತಮ್ಮ ಮಗನ ಭವಿಷ್ಯಕ್ಕೂ ಇದರಿಂದ ಪರಿಣಾಮ ಬೀರುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಮೇಘನಾ ರಾಜ್ ಹಾಗೂ ವಿಜಯ್ ನಡುವೆ ಸ್ನೇಹವಿರುವುದು ಸತ್ಯವಾದರೂ, ಮದುವೆ ಕುರಿತು ಹರಡಿದ ಸುದ್ದಿಗಳು ಕುಟುಂಬದ ಭಾವನಾತ್ಮಕ ಸ್ಥಿತಿಗೆ ಪೆಟ್ಟು ನೀಡಿದೆ ಎಂದು ಅವರು ಹೇಳಿದ್ದಾರೆ. ವೈಯಕ್ತಿಕ ದುಃಖದ ಸಂದರ್ಭದಲ್ಲಿ ಈ ರೀತಿಯ ವದಂತಿಗಳು ತುಂಬಾ ನೋವು ನೀಡುತ್ತವೆ ಎಂದು ವಿಜಯ್ ರಾಘವೇಂದ್ರ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.