‘ಕನ್ನಡತಿ’ದ ಮನೆ ಮಗಳು ಇದೀಗ ಹಾಟ್ ಲುಕ್‌ನಲ್ಲಿ – ಸೋಷಿಯಲ್ ಮೀಡಿಯಾದಲ್ಲಿ ಸಾರಾ ಫೋಟೋಸ್ ವೈರಲ್!


'ಅಮೃತಧಾರೆ' ಹಾಗೂ 'ಕನ್ನಡತಿ' ಸೀರಿಯಲ್‌ಗಳಿಂದ ಮನೆಮಗೆಯಾಗಿ ಗುರುತಿಸಿಕೊಂಡಿರುವ ನಟಿ ಸಾರಾ ಅಣ್ಣಯ್ಯ, ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಸಿ ಬಿಸಿ ಲುಕ್‌ನ ಫೋಟೋಗಳನ್ನು ಹಂಚಿಕೊಂಡಿರುವ ಸಾರಾ, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸರಾಗಿದ್ದಾರೆ.
ಸೀರಿಯಲ್ ಮುಗಿದು ವರ್ಷಗಳಾದರೂ, 'ಕನ್ನಡತಿ' ಸೀರಿಯಲ್‌ನಲ್ಲಿ ಅವರ ಪಾತ್ರ ಮತ್ತು ಅಭಿನಯವನ್ನು ಜನ ಇನ್ನೂ ಮರೆತಿಲ್ಲ. ಈ ಕಾರಣದಿಂದಲೇ ಅವರ ಹೊಸ ಫೋಟೋಗಳಿಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. "ಸಾರಾ, ನಿಮಗೆ ಹೀಗೆ ಲುಕ್ ಸೂಟಾಗೋದಿಲ್ಲ", "ನಿಮ್ಮನ್ನು ಸೀರಿಯಲ್ ಗ್ಲಾಮರ್ ಲುಕ್‌ನಲ್ಲೇ ನೋಡುವುದು ಇಷ್ಟ" ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಪ್ರಸ್ತುತ ಸಾರಾ ದೇಶ-ವಿದೇಶ ಸುತ್ತುವತ್ತ ಬ್ಯುಸಿಯಾಗಿದ್ದು, ತಮ್ಮ ವೈಯಕ್ತಿಕ ಜೀವನದ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಫ್ಯಾಷನ್ ಮತ್ತು ಟ್ರೆಂಡ್‌ಗೆ ತಕ್ಕಂತೆ ನಿರಂತರ ಬದಲಾಗುತ್ತಿರುವ ಅವರ ಶೈಲಿ, ಹಲವರ ಮೆಚ್ಚುಗೆಗೂ ಪಾತ್ರವಾಗಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
