Back to Top

ಗೆಳತಿ ತುಟಿಗೆ ಮುತ್ತು ಕೊಟ್ಟು ಶುಭಾಶಯ ಎಂದ ಸ್ಯಾಂಡಲ್‌ವುಡ್ ನಟಿ ಯಾರಿದು?

SSTV Profile Logo SStv July 3, 2025
ಸ್ನೇಹಿತೆಯ ತುಟಿಗೆ ಮುತ್ತು ಕೊಟ್ಟು ವೈರಲ್ ಆದ ಸಂಯುಕ್ತಾ ಹೆಗ್ಡೆ!
ಸ್ನೇಹಿತೆಯ ತುಟಿಗೆ ಮುತ್ತು ಕೊಟ್ಟು ವೈರಲ್ ಆದ ಸಂಯುಕ್ತಾ ಹೆಗ್ಡೆ!

ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ನಟಿ ಸಂಯುಕ್ತಾ ಹೆಗ್ಡೆ ಇದೀಗ ತನ್ನ ಗೆಳತಿಯೊಬ್ಬರ ತುಟಿಗೆ ಮುತ್ತು ಕೊಟ್ಟ ಫೋಟೋ ಶೇರ್ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಪೋಸ್ಟ್‌ನಲ್ಲಿ ಸ್ನೇಹಿತೆಗೆ ಹುಟ್ಟುಹಬ್ಬದ ಶುಭಾಶಯಗಳನ್ನನ್ನೂ ವಿಶ್ ಮಾಡಿದ್ದು, “ನೀನೇ ನನ್ನ ಪ್ರಪಂಚ, ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತೇನೆ” ಎಂದು ಹೃದಯವೊಂದಿದ ಸಂದೇಶವನ್ನು ಬರೆದಿದ್ದಾರೆ.

ಈ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಸ್ನೇಹದ ನಿಜವಾದ ರೂಪ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಸಾರ್ವಜನಿಕವಾಗಿ ಇಂತಹ ಫೋಟೋ ಶೇರ್ ಮಾಡುವುದು ಸೂಕ್ತವಲ್ಲ ಎಂದು ಟೀಕಿಸಿದ್ದಾರೆ.

ಇದಕ್ಕೂ ಮುಂಚೆ ತಮಿಳು ಚಿತ್ರ ‘ಪಪ್ಪಿ’ನಲ್ಲಿ ಕೂಡ ಸಂಯುಕ್ತಾ ಹೆಗ್ಡೆ ಅವರ ಕಿಸ್ಸಿಂಗ್ ಸೀನ್‌ಗಳು ಸುದ್ದಿಯಾಗಿದ್ದವು. ಪ್ರಸ್ತುತ ಈ ಫೋಟೋ ಕೂಡ ಸಂಯುಕ್ತಾಳ ಪರಿಷ್ಕೃತ ವ್ಯಕ್ತಿತ್ವವನ್ನು ಮತ್ತೆ ಚರ್ಚೆಗೆ ತಂದಿದೆ.