Back to Top

ಪತ್ನಿ ಪಾರ್ಟಿ, ಪಬ್‌ಗೆ ಹೋಗುತ್ತಿದ್ದಳು; ಮನೆಯ ಜವಾಬ್ದಾರಿ ತೆಗೆದುಕೊಳ್ಳಲ್ಲ: ಶ್ರುತಿ ವಿರುದ್ಧ ಪತಿ ಅಂಬರೀಶ್ ಆರೋಪ

SSTV Profile Logo SStv July 14, 2025
ಶ್ರುತಿ ವಿರುದ್ಧ ಪತಿ ಅಂಬರೀಶ್ ಆರೋಪ
ಶ್ರುತಿ ವಿರುದ್ಧ ಪತಿ ಅಂಬರೀಶ್ ಆರೋಪ

ಕಿರುತೆರೆ ನಟಿ ಮಂಜುಳಾ ಅಲಿಯಾಸ್ ಶ್ರುತಿ ಅವರಿಗೆ ಚಾಕು ಇರಿದ ಪ್ರಕರಣದಲ್ಲಿ ಬಂಧಿತ ಪತಿ ಅಂಬರೀಶ್, ಪೊಲೀಸರ ಮುಂದೆ ಪತ್ನಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹನುಮಂತನಗರ ಠಾಣೆಯಲ್ಲಿ ವಿಚಾರಣೆಯ ಸಂದರ್ಭದಲ್ಲಿ ಅಂಬರೀಶ್ ನೀಡಿದ ಹೇಳಿಕೆಯಂತೆ, ಶ್ರುತಿ ಪಾರ್ಟಿ, ಪಬ್‌ಗೆ ತೆರಳುತ್ತಾ, ಸಮಯವಲ್ಲದ ಸಮಯಕ್ಕೆ ಮನೆಗೆ ಬರುವಂತೆ ನಡೆದುಕೊಳ್ಳುತ್ತಿದ್ದರು. ಅವರು ತಾಯಿಯಾಗಿ ಇಬ್ಬರು ಮಕ್ಕಳ ಜವಾಬ್ದಾರಿಯನ್ನೂ ಸರಿಯಾಗಿ ನಿರ್ವಹಿಸುತ್ತಿರಲಿಲ್ಲ ಎಂದು ಅಂಬರೀಶ್ ದೂರಿದ್ದಾರೆ.

ಅಲ್ಲದೇ, ಶ್ರುತಿ ಮನೆಯ ಭೋಗ್ಯವನ್ನು ಕ್ಯಾನ್ಸಲ್ ಮಾಡಿ, ಮನೆ ಬಿಟ್ಟು ಹೋಗಲು ಪ್ಲಾನ್ ಮಾಡಿದ್ದಳು ಎಂದು ಅವರು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಗಲಾಟೆ ಉಂಟಾಗಿ, ಆಕ್ರೋಶದಲ್ಲಿ ಪತ್ನಿಗೆ ಚಾಕು ಇರಿತ ನಡೆಸಿದ್ದಾಗಿ ಪತಿ ಅಂಬರೀಶ್ ಹೇಳಿಕೆ ನೀಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಶ್ರುತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಪ್ರಕರಣದ ತನಿಖೆ ಮುಂದುವರಿದಿದೆ.